ಹರ್ಯಾಣ ಜೈಲಲ್ಲಿ ರೇಪಿಸ್ಟ್ ಬಾಬಾ ಹುಚ್ಚಾಟ!: ಸಾಕು ಪುತ್ರಿಯನ್ನು ಕರೆಸಲು ಹಟ

Published : Sep 02, 2017, 11:56 AM ISTUpdated : Apr 11, 2018, 12:41 PM IST
ಹರ್ಯಾಣ ಜೈಲಲ್ಲಿ ರೇಪಿಸ್ಟ್ ಬಾಬಾ ಹುಚ್ಚಾಟ!: ಸಾಕು ಪುತ್ರಿಯನ್ನು ಕರೆಸಲು ಹಟ

ಸಾರಾಂಶ

ದಶಕಗಳ ಕಾಲ ಐಷಾರಾಮಿ ಜೀವನ ಸಾಗಿಸಿ ಇದೀಗ ಏಕಾಏಕಿ ಜೈಲಿನ ನಾಲ್ಕು ಗೋಡೆಯೊಳಗೆ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಗುರು ಗುರ್ಮೀತ್ ರಾಮ್ ರಹೀಂ ಸಿಂಗ್, ರೋಹ್ತಕ್ ಜೈಲಿನಲ್ಲಿ ಹುಚ್ಚನಂತೆ ವರ್ತಿಸುತ್ತಿದ್ದಾನಂತೆ. ‘ರಬ್ಬಾ.. (ದೇವರೇ..) ನಾನೇನು ತಪ್ಪು ಮಾಡಿದ್ದೇನೆ? ನನಗೆ ಜೀವಿಸಲು ಇಷ್ಟವಿಲ್ಲ. ನನ್ನನ್ನು ಗಲ್ಲಿಗೇರಿಸಿಬಿಡಿ’ ಎಂದು ಗೋಳಾಡುತ್ತಿದ್ದಾನೆ ಎಂದು ಗುರ್ಮೀತ್ ಜತೆ 5 ದಿನ ಜೈಲಲ್ಲಿ ಇದ್ದು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸಹ ಕೈದಿ ಸ್ವದೇಶ್ ಕಿರಾಡ್ ಎಂಬಾತ ತಿಳಿಸಿದ್ದಾನೆ.

ರೋಹ್ತಕ್(ಸೆ.02): ದಶಕಗಳ ಕಾಲ ಐಷಾರಾಮಿ ಜೀವನ ಸಾಗಿಸಿ ಇದೀಗ ಏಕಾಏಕಿ ಜೈಲಿನ ನಾಲ್ಕು ಗೋಡೆಯೊಳಗೆ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಗುರು ಗುರ್ಮೀತ್ ರಾಮ್ ರಹೀಂ ಸಿಂಗ್, ರೋಹ್ತಕ್ ಜೈಲಿನಲ್ಲಿ ಹುಚ್ಚನಂತೆ ವರ್ತಿಸುತ್ತಿದ್ದಾನಂತೆ. ‘ರಬ್ಬಾ.. (ದೇವರೇ..) ನಾನೇನು ತಪ್ಪು ಮಾಡಿದ್ದೇನೆ? ನನಗೆ ಜೀವಿಸಲು ಇಷ್ಟವಿಲ್ಲ. ನನ್ನನ್ನು ಗಲ್ಲಿಗೇರಿಸಿಬಿಡಿ’ ಎಂದು ಗೋಳಾಡುತ್ತಿದ್ದಾನೆ ಎಂದು ಗುರ್ಮೀತ್ ಜತೆ 5 ದಿನ ಜೈಲಲ್ಲಿ ಇದ್ದು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸಹ ಕೈದಿ ಸ್ವದೇಶ್ ಕಿರಾಡ್ ಎಂಬಾತ ತಿಳಿಸಿದ್ದಾನೆ.

ಜೈಲಲ್ಲಿ ಬಾಬಾ ಅದೇನೋ ಪಂಜಾಬಿಯಲ್ಲಿ ಬಡಬಡಿಸುತ್ತಿರುತ್ತಾನೆ. ಯಾರೊಂದಿಗೂ ಬೆರೆಯಲು ಆತ ಇಷ್ಟಪಡುತ್ತಿಲ್ಲ. 5 ದಿನದಿಂದ ಆಹಾರವನ್ನೂ ಸೇವಿಸುತ್ತಿಲ್ಲ. ಕೇವಲ ಹಾಲು, ಚಹಾ ಮತ್ತು ಬಿಸ್ಕತ್ತು ಮಾತ್ರ ಸೇವಿಸುತ್ತಿದ್ದಾನೆ. ಜೈಲಿಗೆ ಬಂದ ಮೊದಲ ದಿನವಂತೂ ನಿದ್ದೆಯನ್ನೇ ಮಾಡಲಿಲ್ಲ. ಇನ್ನು ಸ್ವಲ್ಪ ದಿನ ಹಾಗೆಯೇ ಇದ್ದರೆ ಆತ ಹುಚ್ಚನಾಗಲಿದ್ದಾನೆ’ ಎಂದು ಕಿರಾಡ್ ಹೇಳಿದ್ದಾನೆ.

ಬಾಬಾ ಜೈಲಿಗೆ ಬಂದ ನಂತರ ಇತರ ಸಹ ಕೈದಿಗಳು ಆತನ ಮೇಲೆ ಕೋಪಗೊಂಡಿದ್ದರು. ಆತನಿಂದಾಗಿ ಗಲಭೆ ನಡೆದು 38 ಮಂದಿ ಸಾವನ್ನಪ್ಪಿದ ಬಗ್ಗೆ ಕೈದಿಗಳಿಗೆ ಸಿಟ್ಟಿತ್ತು. ಆತನನ್ನು ಪ್ರತ್ಯೇಕ ಸೆಲ್ ನಲ್ಲಿ ಇಡದೇ ಹೋಗಿದ್ದರೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು. ಆದರೆ ಗುರ್ಮೀತ್‌ನನ್ನು ವಿಶೇಷ ಆತಿಥ್ಯದಿಂದ ಜೈಲಿನಲ್ಲಿ ನೋಡಿಕೊಳ್ಳುತ್ತಿಲ್ಲ. ಸಾಮಾನ್ಯ ಕೈದಿಯಂತೆಯೇ ನಡೆಸಿಕೊಳ್ಳಲಾಗುತ್ತಿದೆ ಎಂದು ಸ್ವದೇಶ್ ಮಾಹಿತಿ ನೀಡಿದ್ದಾನೆ.

ಸಾಕು ಪುತ್ರಿಯನ್ನು ಕರೆಸಲು ಹಟ

ತನ್ನ ಸಾಕು ಮಗಳು ಹನಿಪ್ರೀತ್ ಇನ್ಸಾನ್‌ಳನ್ನು ಗುರ್ಮೀತ್ ರಾಮ್ ರಹೀಂ ಸಿಂಗ್ ಸದಾ ನೆನಪಿಸಿಕೊಳ್ಳುತ್ತಾನೆ. ಅನಾರೋ ಗ್ಯದಿಂದ ಬಳಲುತ್ತಿರುವ ತನಗೆ ಔಷಧಿಯನ್ನು ಆಕೆಯೇ ನೀಡಬೇಕು ಎಂದು ಬಾಬಾ ಬಯಸು ತ್ತಾನೆಂದು ಜೈಲಿಂದ ಬಿಡುಗಡೆ ಆಗಿ ಬಂದಿರುವ ಕೈದಿ ಸ್ವದೇಶ್ ಕಿರಾಡ್ ಹೇಳಿದ್ದಾನೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!