ಚೀನಾ ಉತ್ಪನ್ನಗಳನ್ನು ನಿರ್ಬಂಧಿಸುವ ಪ್ರಸ್ತಾಪ ಇಲ್ಲ: ಕೇಂದ್ರ

Published : Jul 31, 2017, 05:35 PM ISTUpdated : Apr 11, 2018, 12:58 PM IST
ಚೀನಾ ಉತ್ಪನ್ನಗಳನ್ನು ನಿರ್ಬಂಧಿಸುವ ಪ್ರಸ್ತಾಪ ಇಲ್ಲ: ಕೇಂದ್ರ

ಸಾರಾಂಶ

ಚೀನಾ ಅಥವಾ ಯಾವುದೇ ದೇಶದ ವಸ್ತುಗಳನ್ನು ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಭಾರತಕ್ಕೆ ಆಮದಾಗುವ ಎಲ್ಲಾ ಸಾಮಾಗ್ರಿಗಳು ದೇಶದ ಕಾನೂನು, ನೀತಿ-ನಿಯಮಾವಳಿಗಳು, ಆದೇಶಗಳು, ತಾಂತ್ರಿಕ ಗುಣಮಟ್ಟ, ಪರಿಸರ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನು ಉಲ್ಲಂಘಿಸುವ ವಸ್ತುಗಳನ್ನು ನಿಷೇಧಿಸಬಹುದಾಗಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಿಳಿಸಿದ್ದಾರೆ.

ನವದೆಹಲಿ: ಚೀನಾ ಅಥವಾ ಯಾವುದೇ ದೇಶದ ವಸ್ತುಗಳನ್ನು ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.

ಭಾರತಕ್ಕೆ ಆಮದಾಗುವ ಎಲ್ಲಾ ಸಾಮಾಗ್ರಿಗಳು ದೇಶದ ಕಾನೂನು, ನೀತಿ-ನಿಯಮಾವಳಿಗಳು, ಆದೇಶಗಳು, ತಾಂತ್ರಿಕ ಗುಣಮಟ್ಟ, ಪರಿಸರ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನು ಉಲ್ಲಂಘಿಸುವ ವಸ್ತುಗಳನ್ನು ನಿಷೇಧಿಸಬಹುದಾಗಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಿಳಿಸಿದ್ದಾರೆ.

ದೇಶದಲ್ಲಿ ತಯಾರಾಗುವ ಹಾಗೂ ವಿದೇಶಗಳಿಂದ ಆಮದಾಗುವ ಎಲ್ಲಾ ಉತ್ಪನ್ನಗಳ ಗುಣಮಟ್ಟದ ಮಾನದಂಡಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)  ರೂಪಿಸುತ್ತದೆ. ಬಿಐಎಸ್ ಕಡ್ಡಾಯ ನೋಂದಣಿ ಯೋಜನೆಯಡಿಯಲ್ಲಿ ಈಗಾಗಲೇ 109 ಉತ್ಪನ್ನಗಳು ಹಾಗೂ 30 ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿವೆ. ಉಕ್ಕು, ವಿದ್ಯುತ್ ಉಪಕರಣಗಳು, ಟ್ಯೂಬ್ & ಟೈರ್ ಮುಂತಾದವುಗಳನ್ನು ತಯಾರಿಸುವ 204 ಚೀನಾ ಕಂಪನಿಗಳಿಗೆ ಈವರೆಗೆ ಪರವಾನಿಗೆ ನೀಡಲಾಗಿದೆ.  ಅದೇ ರೀತಿ, ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಾಮಗ್ರಿಗಳನ್ನು ತಯಾರಿಸುವ 4636 ಚೀನಾ ಕಂಪನಿಗಳು ನೋಂದಣಿಯಾಗಿವೆ.  ವರ್ಲ್ಡ್ ಟ್ರೇಡ್ ಆರ್ಗನೈಝೇಶನ್ (WTO) ಸದಸ್ಯನಾಗಿರುವ ನೆಲೆಯಲ್ಲಿ ಭಾರತದ ನಿಯಮಗಳು ಎಲ್ಲಾ  ಸದಸ್ಯರಾಷ್ಟ್ರಗಳಿಗೆ ಅನ್ವಯವಾಗುತ್ತದೆ, ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ದೃಷ್ಟಿಯಲ್ಲಿ ಆರೆಸ್ಸೆಸ್‌ ನೋಡುವುದು ತಪ್ಪು : ಭಾಗ್ವತ್‌
ಬಿಜೆಪಿ ನವ ಕಾರ್ಯಾಧ್ಯಕ್ಷ ನಿತಿನ್‌ ಶಾಸಕ ಸ್ಥಾನ ಬಿಟ್ಟು ರಾಜ್ಯಸಭೆಗೆ?