
ಗುಡಗಾಂವ್(ಜು.31): ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಮಹಿಳೆಯರ ಜಡೆಗಳಿಗೆ ಸಂಚಕಾರ ಎದುರಾಗಿದೆ. ಕಳೆದ 15 ದಿನಗಳಲ್ಲಿ ಮಹಿಳೆಯರ ಜಡೆಯನ್ನು ಕತ್ತರಿಸಿದ 15 ಘಟನೆಗಳು ವರದಿಯಾಗಿವೆ. ಆದರೆ, ಜಡೆಯನ್ನು ಯಾರು ಕತ್ತರಿಸುತ್ತಿದ್ದಾರೆ. ಅವರ ಉದ್ದೇಶವೇನು ಎನ್ನುವುದು ಮಾತ್ರ ನಿಗೂಢ.
ಈ ವಿಚಿತ್ರ ಕೃತ್ಯದಿಂದಾಗಿ ಮೇವಾತ್ ಗ್ರಾಮಗಳ ಮಹಿಳೆಯರಲ್ಲಿ ಆತಂಕ ಶುರುವಾಗಿದೆ. ಬಹುತೇಕ ಮಹಿಳೆಯರಿಗೆ ಪ್ರಜ್ಞೆ ತಪ್ಪಿಸಿ ಅವರ ಜಡೆಗಳನ್ನು ಕತ್ತರಿಸಲಾಗುತ್ತಿದೆ. ಇದರ ಹಿಂದೆ ಕಳ್ಳಕಾಕರ ಕೈವಾಡ ಇರುವುದೂ ಸಾಬೀತಾಗಿಲ್ಲ. ಪ್ರಜ್ಞೆತಪ್ಪಿಸಿ ಜಡೆ ಕತ್ತರಿಸಿದ್ದರೂ ಯಾವುದೇ ವಸ್ತುವೂ ಕಳ್ಳತನವಾಗಿಲ್ಲ. ಹೀಗಾಗಿ ಘಟನೆ ಸಂಬಂಧ ಯಾವುದೇ ಎಫ್'ಐಆರ್ ದಾಖಲಾಗಿಲ್ಲ.
ಒಂದು ತಿಂಗಳ ಹಿಂದೆ ರಾಜಸ್ಥಾನದ ಕೆಲ ಭಾಗಗಳಲ್ಲಿ ಮಹಿಳೆಯರ ಜಡೆ ಕತ್ತರಿಸಿದ ಘಟನೆಗಳು ವರದಿಯಾಗಿದ್ದವು. ಆ ಘಟನೆ ಇದೀಗ ಗುಡಗಾಂವ್‌ಗೂ ವಿಸ್ತರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.