
ಜಮ್ಮು,ಕಾಶ್ಮೀರ (ಫೆ. 18): 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿಯ ಭಯಾನಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
30 ಸೆಕೆಂಡ್ ಇರುವ ಈ ಸಿಸಿಟಿವಿ ಕ್ಯಾಮೆರಾದ ವಿಡಿಯೋದಲ್ಲಿ ಸಿಆರ್‌ಪಿಎಫ್ ಯೋಧರ ಬೆಂಗಾವಲು ವಾಹನಗಳು ಚಲಿಸುತ್ತಿರುವಾಗ ಭಾರೀ ದೊಡ್ಡ ಪ್ರಮಾಣದ ಸ್ಫೋಟವೊಂದು ಸಂಭವಿಸುತ್ತದೆ. ಅದಾದ ನಂತರ, ಸುತ್ತಮುತ್ತಲಿನ ವಾತಾವರಣವೆಲ್ಲವೂ ಕಪ್ಪು ಬಣ್ಣಕ್ಕೆ ತಿರುಗುವ ಅಂಶಗಳು ದಾಖಲಾಗಿವೆ.
ಇದು ಮೇಲ್ನೋಟಕ್ಕೆ ಕಾಶ್ಮೀರದ ಪುಲ್ವಾಮಾ ಘಟನೆಯನ್ನೇ ಹೋಲುತ್ತದೆ. ಆದ ಕಾರಣ ಈ ವಿಡಿಯೋವನ್ನು ಜಮ್ಮು-ಕಾಶ್ಮೀರಿಗರು ಸೇರಿದಂತೆ ಇತರರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಆದರೆ, ವಾಸ್ತವದ ಸಂಗತಿಯೆಂದರೆ, ಈ ವಿಡಿಯೋದಲ್ಲಿರುವ ಸ್ಫೋಟ ಘಟನೆಗೂ ಪುಲ್ವಾಮಾ ದುಷ್ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ‘ಬೂಮ್ ಲೈವ್’ ಎಂಬ ವೈಬ್‌ಸೈಟ್ ಪತ್ತೆ ಮಾಡಿದೆ. 2007ರಲ್ಲಿ ಇರಾಕ್‌ನಲ್ಲಿ ಸಂಭವಿಸಿದ ಸ್ಫೋಟ ಘಟನೆಯ ಕುರಿತಾದ ವಿಡಿಯೋ ಇದಾಗಿದ್ದು, ಪುಲ್ವಾಮಾ ಘಟನೆಯಂತೆಯೇ ಕಾಣುತ್ತದೆ. ಆದರೆ, ವಾಸ್ತವವಾಗಿ ಪುಲ್ವಾಮಾ ವಿಧ್ವಂಸಕ ಘಟನೆಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂದು ವೆಬ್‌ಸೈಟ್ ಸ್ಪಷ್ಟಪಡಿಸಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.