ಹುತಾತ್ಮ ಯೋಧರ ಕುಟುಂಬಗಳ ನೆರವಿಗೆ ಬಂದ ಇನ್ಫೋಸಿಸ್​ ಫೌಂಡೇಶನ್

By Web DeskFirst Published Feb 17, 2019, 3:16 PM IST
Highlights

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ  ಯೋಧರ ಕುಟುಂಬಕ್ಕೆ ದೇಶಾದ್ಯಂತ ಸಾರ್ವಜನಿಕರು ಕಂಬನಿ ಮಿಡಿದಿದ್ದು, ಇನ್ಫೋಸಿಸ್ ಫೌಂಡೇಶನ್ ವತಿಯಿಂದಲೂ ಎಲ್ಲಾ ಯೋಧರ ಕುಟುಂಬಗಳಿಗೆ ನೆರವು ನೀಡಲು ಮುಂದಾಗಿದೆ. 

ಬೆಂಗಳೂರು, (ಫೆ.17): ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್​ ಫೌಂಡೇಶನ್ ಘೊಷಿಸಿದೆ. 

ತಮ್ಮ ಸಂಸ್ಥೆಯ ವತಿಯಿಂದ ಯೋಧರ ಕುಟುಂಬಕ್ಕೆ ತಲಾ 10  ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.

ಮಲೇಷ್ಯಾದಿಂದಲೇ ಹುತಾತ್ಮ ಗುರು ಕುಟುಂಬಕ್ಕೆ ಜಮೀನು ನೆರವು ಘೋಷಿಸಿದ ಸುಮಲತಾ ಅಂಬರೀಶ್

'ದೇಶಕ್ಕಾಗಿ ಯೋಧರು ಬಲಿಯಾಗಿದ್ದಾರೆ. ಪತ್ರಿಕೆಯಲ್ಲಿ ಓದಿದ ದಿನವೇ ಹಣ ಕೊಡಬೇಕೆಂದುಕೊಂಡೆ. ಹಣ ಮುಖ್ಯವಲ್ಲ, ಯೋಧರ ಜೀವ ಹೋಗಿದೆ. ಅದಕ್ಕೆ ನೋವಿದೆ. ನಮ್ಮ ಸಂಸ್ಥೆಯ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ನಿರ್ಧರಿಸಿದ್ದೇವೆ' ಎಂದು ಹೇಳಿದರು.

'ಮಂಡ್ಯದ ವೀರ ಯೋಧ ಗುರು ಹುಟ್ಟೂರಿಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ಗುರು ಪತ್ನಿ ಕಲಾವತಿ ಮನೆಗೆ ಮಾರ್ಚ್​ 15 ರ ನಂತರ ತೆರಳುತ್ತೇನೆ. 

ರಾಷ್ಟ್ರಕ್ಕಾಗಿ ಬಲಿದಾನವಾದವರ ಹಿಂದೆ ನಾವಿದ್ದೇವೆ. ನನಗೆ ದುಡ್ಡು ಕೊಟ್ಟೆ ಎನ್ನುವ ಪ್ರಚಾರ ಬೇಕಿಲ್ಲ. ಈ ಪ್ರೇರಣೆಯಿಂದ ಬೇರೆಯವರು ಸಹಾಯ ಹಸ್ತ ನೀಡುತ್ತಾರೆ. ಹೀಗಾಗಿ ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೀಡುತ್ತಿದ್ದೇವೆ' ಎಂದರು.

ಮತ್ತೊಂದೆಡೆ ಯೋಧರ ಮಕ್ಕಳ ವಿದ್ಯಾಭ್ಯಾಸ ಖರ್ಚು ವೆಚ್ಚದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಹಾಗೂ ರಿಲಾನ್ಸ್ ಹೇಳಿದೆ.

ಇನ್ನು ಮಂಡ್ಯದ ಗಂಡುಗಲಿ ಎಚ್. ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವುದಾಗಿ ಸುಮಲತಾ ಅಂಬರೀಶ್ ಘೋಷಿಸಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಸ್ಫೋಟಕ ತುಂಬಿದ ಕಾರನ್ನು ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಸಿ ಭೀಕರ ಸ್ಫೋಟ ಸಂಭವಿಸಿತ್ತು. ಇದರಿಂದ 44  ಯೊಧರು ಹುತಾತ್ಮರಾಗಿದ್ದರು. 

click me!