ಪಾಕ್ ಗೆ ಜೈಕಾರ : ನಾಲ್ವರು ವಿದ್ಯಾರ್ಥಿಗಳು ಅರೆಸ್ಟ್, ನಾಲ್ವರ ಸಸ್ಪೆಂಡ್

By Web DeskFirst Published Feb 17, 2019, 1:57 PM IST
Highlights

ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ಜೈಪುರದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 

ಜೈಪುರ: ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. 44 ಯೊಧರು ವೀರಮರಣವನ್ನಪ್ಪಿದ್ದು, ಪ್ರತಿಕಾರದ ಕಿಚ್ಚು ಭಾರತೀಯರ ಹೃದಯದಲ್ಲಿ ಹೊತ್ತಿದೆ. 

ಆದರೆ ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರ ಬಗ್ಗೆ ಅವಹೇಳನ ಮಾಡಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಬರಹ ಬರೆದ ನಾಲ್ವರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರ ಮೂಲದ ನಾಲ್ವರು ರಾಜಸ್ತಾನದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದವರು ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

ಈ ನಡುವೆ, ಪುಲ್ವಾಮಾ ದಾಳಿ ಬೆಂಬಲಿಸಿದ ಜೈಪುರ ನಿಮ್ಸ್ ವಿವಿಯ ನಾಲ್ವರು ಕಾಶ್ಮೀರಿ ಮಹಿಳಾ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ವಿದ್ಯಾರ್ಥಿಗಳ ನಡೆಯ ಬಗ್ಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಇಂತಹ ಕೃತ್ಯಗಳಿಗೆ ವಿಶ್ವವಿದ್ಯಾಲಯ ಎಂದಿಗೂ ಬೆಂಬಲ ನೀಡುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಹಾಗೂ  ಕಾಲೇಜುಗಳಿಂದಲೂ ಸಸ್ಪೆಂಡ್ ಮಾಡಲಾಗಿದೆ ಎಂದಿದೆ.

click me!