
ಪುದುಚೇರಿ(ಡಿ.30): ಸರಳತೆಯ ಸಾಕಾರ ಮೂರ್ತಿ, ಖಡಕ್ ಐಪಿಎಸ್ ಆಫೀಸರ್, ಪುದುಚೇರಿಯ ಲೆಫ್ಟಿನೆಂಟ್ ಗರ್ವನರ್, ಭಾರತದ ಮಹಿಳಾ ಶಕ್ತಿಯ ಪ್ರತೀಕ...ಇಷ್ಟು ಸಾಕು ಕಿರಣ್ ಬೇಡಿ ಅವರನ್ನು ಪರಿಚಯ ಮಾಡಲು.
ಆದರೆ ಇಷ್ಟೆಲ್ಲ ಪೀಠಿಕೆ ಹಾಕಿದರೆ ಕಿರಣ್ ಬೇಡ ಬೈತಾರೆ. ಯಾಕೆ ಅಂತೀರಾ?. ಇದಕ್ಕೆ ಉತ್ತರ ಈ ವಿಡಿಯೋದಲ್ಲಿದೆ. ಕಾರ್ಯಕ್ರಮವೊಂದಕ್ಕೆ ಆಹ್ವಾನಿತರಾಗಿದ್ದ ಕಿರಣ್ ಬೇಡಿ, ಅಲ್ಲಿ ತಮ್ಮ ಸ್ವಾಗತಕ್ಕಾಗಿ ಮಾಡಿದ ಖರ್ಚನ್ನು ಕಂಡು ಆಯೋಜಕರಿಗೆ ಭರ್ಜರಿ ಪಾಠ ಮಾಡಿದ್ದಾರೆ.
"
ಕಾರ್ಯಕ್ರಮದ ಮುಖ್ಯ ದ್ವಾರದಲ್ಲಿ ತಮ್ಮನ್ನು ಸ್ವಾಗತಿಸುವ ಫ್ಲೆಕ್ಸ್ ಕಂಡು ದಂಗಾದ ಕಿರಣ್ ಬೇಡಿ, ಇದಕ್ಕಾಗಿ ಎಷ್ಟು ಖರ್ಚು ಮಾಡಿದ್ದೀರಿ ಎಂದು ಆಯೋಜಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ತಾವೇ ಖುದ್ದಾಗಿ ಬ್ಯಾನರ್ ಅನ್ನು ತೆಗೆದು, ಆಯೋಜಕನಿಗೆ ತಮ್ಮ ಭದ್ರತಾ ಸಿಬ್ಬಂದಿ ಕಡೆಯಿಂದ 500 ರೂ. ಕೊಡಿಸಿದ್ದಾರೆ.
ನಂತರ ಒಳಬಂದ ಕಿರಣ್ ಬೇಡಿ ಅವರಿಗೆ ಹೂಮಾಲೆ ಹಾಕಿ, ಶಾಲು ಹೊದಿಸಿ ಸ್ವಾಗತಿಸಲು ಮುಂದಾದಾಗ, ಅದಕ್ಕೂ ಬೇಡ ಎಂದ ಕಿರಣ್ ಬೇಡಿ, ಮತ್ತೆ ತಮ್ಮ ಭದ್ರತಾ ಸಿಬ್ಬಂದಿಯಿಂದ ಆಯೋಜಕರಿಗೆ ಹಣ ವಾಪಸ್ ಕೊಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.