ಯಾರ ಕೈಗೂ ಸಿಗದ ರಮೇಶ್ ಜಾರಕಿಹೊಳಿ ಚೀನಾದಲ್ಲಿ?

Published : Dec 30, 2018, 01:21 PM IST
ಯಾರ ಕೈಗೂ ಸಿಗದ ರಮೇಶ್ ಜಾರಕಿಹೊಳಿ ಚೀನಾದಲ್ಲಿ?

ಸಾರಾಂಶ

ಸಂಪುಟ ವಿಸ್ತರಣೆ ಬಳಿಕ ಕಾಣೆಯಾದ ರಮೇಶ್ ಜಾರಕಿಹೊಳಿ ಬಗ್ಗೆ ಇಲ್ಲಿದೆ ಸುದ್ದಿ. ಸದ್ಯ ಚೀನಾದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. 

ಬೆಂಗಳೂರು :  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಕರ್ನಾಟಕದ ರಾಜಕಾರಣಿಗಳು ತಲೆಕೆಡೆಸಿಕೊಂಡಿದ್ದರೆ ಅವರು ಮಾತ್ರ ಚೀನಾ ಪ್ರವಾಸಕ್ಕೆ ಹೋಗಿದ್ದಾರೆ. 

ರಮೇಶ್ ಜಾರಕಿಹೊಳಿ ಅವರಿಗೆ ಸ್ವಂತ ಸಕ್ಕರೆ ಕಾರ್ಖಾನೆ ಇದೆ. ಆ ಕಾರ್ಖಾನೆಯ ಆದಾಯ ಹೇಗೆ ಹೆಚ್ಚಳ ಮಾಡಬಹುದು ಎನ್ನುವ ಕುರಿತು ಅವರು ಕಾರ್ಖಾನೆ ಅಧಿಕಾರಿಗಳ ಜತೆಗೆ ಇತ್ತೀಚೆಗಷ್ಟೇ ಗಂಭೀರ ಚರ್ಚೆ ಮಾಡಿದ್ದರು. ಆಗ ಚೀನಾ ಮಾದರಿ ಅನುಸರಿಸಿದರೆ ಹೇಗೆ ಎನ್ನುವ ಪ್ರಸ್ತಾಪ ಅಧಿಕಾರಿಗಳಿಂದ ಬಂದಿತ್ತಂತೆ. 

ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಒಂದು ಕೈ ನೋಡಿಯೇ ಬಿಡೋಣ ಎಂದು ಮುಂಬೈ ಮೂಲಕ ಚೀನಾಗೆ ತೆರಳಿದ್ದಾರೆ. ಮುಂದಿನ ವಾರ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಸುಳ್‌ಸುದ್ದಿ ಸಂಸ್ಥೆಗೆ ಮೂಲಗಳು ತಿಳಿಸಿವೆ.

[ಸುಳ್ ಸುದ್ದಿ - ಕೇವಲ ಮನರಂಜನೆಗಾಗಿ ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?