
ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾ.9ರಿಂದ 27ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷಾ ಅವಧಿಯಲ್ಲಿ ಮೂರು ಭಾನುವಾರದ ರಜೆಗಳನ್ನು ಹೊರತುಪಡಿಸಿ, ಇನ್ಯಾವುದೇ ಸಾರ್ವತ್ರಿಕ ರಜೆಗಳು ದೊರೆತಿಲ್ಲ. ಮಾ.9ರಿಂದ 27ರವರೆಗೆ ನಿರಂತರವಾಗಿ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಕಳೆದ ನ.3ರಂದು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದ ಇಲಾಖೆ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಕೆಲ ಬದಲಾ ವಣೆಗಳನ್ನು ಮಾಡಿ ಇದೀಗ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.
ಅಂತಿಮ
ವೇಳಾಪಟ್ಟಿಪರೀಕ್ಷಾ
ದಿನಾಂಕ ವಿಷಯಮಾ
. 9: ಜೀವಶಾಸ್ತ್ರ, ಇತಿಹಾಸಮಾ
. 10: ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನಮಾ
. 11 ತರ್ಕಶಾಸ್ತ್ರ, ಶಿಕ್ಷಣ, ಬೇಸಿಕ್ ಮ್ಯಾಥ್ಸ್ಮಾ
. 12 ರಜೆಮಾ
. 13 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರಮಾ
. 14 ಗಣಿತಮಾ
. 15 ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತಮಾ
. 16 ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರಮಾ
. 17 ಭೌತಶಾಸ್ತ್ರಮಾ
. 18 ಮನಃಶಾಸ್ತ್ರಮಾ
.19 ರಜೆಮಾ
. 20 ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಐಚ್ಛಿಕ ಕನ್ನಡಮಾ
. 21 ರಾಜ್ಯಶಾಸ್ತ್ರಮಾ
. 22 ಹಿಂದಿ, ತೆಲುಗುಮಾ
. 23 ಕನ್ನಡ, ತಮಿಳು, ಮಲಯಾಳ, ಅರೇಬಿಕ್ಮಾ
. 24 ಸಂಸ್ಕೃತ, ಮರಾಠಿ, ಉರ್ದು, ಫೆಂಚ್ಮಾ
. 25 ಭೂಗೋಳ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನಮಾ
. 27 ಇಂಗ್ಲಿಷ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.