ಮೇ 10ಕ್ಕೆ ಪಿಯು ಫಲಿತಾಂಶ: ಮೇ2, 3, 4ಕ್ಕೆ ಸಿಇಟಿ

Published : Apr 15, 2017, 02:39 AM ISTUpdated : Apr 11, 2018, 01:11 PM IST
ಮೇ 10ಕ್ಕೆ ಪಿಯು ಫಲಿತಾಂಶ: ಮೇ2, 3, 4ಕ್ಕೆ ಸಿಇಟಿ

ಸಾರಾಂಶ

ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸುಸೂತ್ರವಾಗಿ ನಡೆಯುತ್ತಿದ್ದು ಮೇ 10ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 2, 3, 4 ರಂದು ಸಿಇಟಿ ಮತ್ತು ಮೇ 7ರಂದು ನೀಟ್‌ ಪರೀಕ್ಷೆ ನಡೆಯುತ್ತಿದ್ದು, ಈ ಪರೀ ಕ್ಷೆಯ ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಕಟಿಸಲಾ ಗುವುದು ಎಂದು ಎಂದು ಪ್ರಾಥ ಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮಾಹಿತಿ ನೀಡಿದ್ದಾರೆ.

ರಾಯಚೂರು(ಏ.15): ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸುಸೂತ್ರವಾಗಿ ಮುಗಿದರೆ ಮೇ 10ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 2, 3, 4 ರಂದು ಸಿಇಟಿ ಮತ್ತು ಮೇ 7ರಂದು ನೀಟ್‌ ಪರೀಕ್ಷೆ ನಡೆಯು ತ್ತಿದ್ದು, ಈ ಪರೀಕ್ಷೆಯ ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಕಟಿಸಲಾ ಗುವುದು ಎಂದು ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮಾಹಿತಿ ನೀಡಿದ್ದಾರೆ.

ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸುಸೂತ್ರವಾಗಿ ನಡೆಯುತ್ತಿದ್ದು ಮೇ 10ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 2, 3, 4 ರಂದು ಸಿಇಟಿ ಮತ್ತು ಮೇ 7ರಂದು ನೀಟ್‌ ಪರೀಕ್ಷೆ ನಡೆಯುತ್ತಿದ್ದು, ಈ ಪರೀ ಕ್ಷೆಯ ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಕಟಿಸಲಾ ಗುವುದು ಎಂದು ಎಂದು ಪ್ರಾಥ ಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಸಚಿವರು, ಪಿಯುಸಿ ಫಲಿತಾಂಶ ಮತ್ತು ಸಿಇಟಿ, ನೀಟ್‌ ಪರೀಕ್ಷೆಗಳ ದಿನಾಂಕ ಕುರಿತು ನೀಡಿದ ಹೇಳಿಕೆ ಗೊಂದಲ ಸೃಷ್ಟಿಸಿದ ಪ್ರಸಂಗವೂ ಜರುಗಿತು. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಸಚಿವರು ಬೆಳಗ್ಗೆ ಮೇ 6 ಮತ್ತು 7ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, 8 ಮತ್ತು 9ರಂದು ನೀಟ್‌ ಪರೀಕ್ಷೆ ನಡೆಯಲಿದೆ.

ಈ ಪರೀಕ್ಷೆ ಮುಗಿದ ಮರುದಿನವೇ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಆದರೆ, ಪತ್ರಕರ್ತರು ಆನ್‌ಲೈನ್‌ನಲ್ಲಿ ತಡಕಾಡಿದಾಗ ಸಚಿವರು ಹೇಳಿದ ದಿನಾಂಕಕ್ಕೂ ಸಿಇಟಿ, ನೀಟ್‌ ಪರೀಕ್ಷೆಗೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿ ಸಿರುವ ನೋಟಿಫಿಕೇಷನ್‌ಗೂ ವ್ಯತ್ಯಾಸ ಇರುವುದು ಗಮನಕ್ಕೆ ಬಂದಿದೆ.

 

ಪರೀಕ್ಷಾ ಪ್ರಾಧಿಕಾರದ ನೋಟಿಫಿಕೇಷನ್‌ನಲ್ಲಿ ಸಿಇಟಿ ಪರೀಕ್ಷೆ ಮೇ 2, 3, 4ರಂದು ಮತ್ತು ನೀಟ್‌ ಪರೀಕ್ಷೆ ಮೇ 7ರಂದು ನಡೆಯಲಿದೆ ಎಂದು ಹೇಳಲಾಗಿತ್ತು. ಈ ವಿಚಾರವನ್ನು ಮಧ್ಯಾಹ್ನ ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ‘ನೋಟಿಫಿಕೇಷನ್‌ ಹೊರಡಿಸಿದ ವಿಚಾರ ಗಮನಕ್ಕೇ ಬಂದಿಲ್ಲ' ನೋಟಿಫಿಕೇಷನ್‌ನಲ್ಲಿ ಏನು ಹೇಳಿದೆಯೋ ಅದನ್ನೇ ಬರೆದುಕೊಳ್ಳಿ ಎಂದು ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿಯೂ ಮೇ 10ಕ್ಕಾ?

ಸಚಿವರ ಗೊಂದಲದ ಹೇಳಿಕೆ ಇಲ್ಲಿಗೇ ನಿಂತಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವೂ ಮೇ 10ರಂದೇ ಪ್ರಕಟವಾಗಲಿದೆ ಎಂದು ಅವರು ಒಂದು ಹಂತದಲ್ಲಿ ಬಾಯ್ತಪ್ಪಿ ಹೇಳಿದ್ದರು. ಈ ಕುರಿತು ಸಂಬಂಧ ಪಟ್ಟಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈಗಷ್ಟೇ ಪರೀಕ್ಷೆ ಮುಗಿದಿದೆ. ಮೇ 10ರಂದು ಫಲಿತಾಂಶ ಪ್ರಕಟಿಸುವುದು ಕಷ್ಟ. ಈ ಕುರಿತು ಸಚಿವರನ್ನೇ ಕೇಳಬೇಕು, ನಮ್ಮ ಜತೆಯಂತು ಈ ವಿಚಾರಕ್ಕೆ ಸಂಬಂಧಿಸಿ ಅವರು ಈವರೆಗೆ ಸಭೆ ನಡೆಸಿಲ್ಲ ಎಂದು ಉತ್ತರ ನೀಡಿದ್ದರು.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ: ಇಕ್ಬಾಲ್
ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌: ಬಿಜೆಪಿಗೇ 82%!