
ಶ್ರೀನಗರ(ಅ.06): ಪಾಕಿಸ್ತಾನ ಉಗ್ರರನ್ನ ಪೋಷಿಸುತ್ತಿದೆ ಎಂದು ಆರೋಪಕ್ಕೆ ತಾಜಾ ಉದಾಹರಣೆ ಸಿಕ್ಕಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳು ಟ್ರೈನಿಂಗ್ ಕ್ಯಾಂಪ್`ಗಳಿರುವ ಬಗ್ಗೆ ಮತ್ತು ಅದನ್ನ ಪಾಕಿಸ್ತಾನವೇ ಪೋಷಿಸುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳೇ ಸತ್ಯ ಬಿಚ್ಚಿಟ್ಟಿದ್ದಾರೆ.
ನಾವಿಲ್ಲಿ ಜೀವಂತ ನರಕದಲ್ಲಿದ್ದೇವೆ. ಟೆರರ್ ಕ್ಯಾಂಪ್`ಗಳು ನಮಗೆ ನರಕ ತೋರಿಸುತ್ತಿವೆ ಎಂದು ಪಾಕ್ ಆಕ್ರಮಿತ ಕಾಶ್ಮೀರದ ಜನ ನೋವನ್ನ ವ್ಯಕ್ತಪಡಿಸಿರುವುದಾಗಿ ಎಎನ್`ಐ ವರದಿ ಮಾಡಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಬಾದ್, ಕೋಟ್ಲಿ, ಚಿನಾರಿ, ಮೀರ್ಪುರ್, ಗಿಲ್ಗಿಟ್, ಡೈಮರ್ ಮತ್ತು ನೀಲಂ ಕಣಿವೆಯ ಜನ ಇದೀಗ ಪಾಕಿಸ್ತಾನದ ಈ ವರ್ತನೆ ವಿರುದ್ಧ ಸಿಡಿದೆದ್ದಿದ್ದು ಪ್ರತಿಭಟನೆ ನಡೆಸುತ್ತಿದ್ಧಾರೆ. ಇಲ್ಲಿ ನಿಷೇಧಿತ ಉಗ್ರಗಾಮಿಗಳ ಸಂಘಟನೆಗಳ ಕ್ಯಾಂಪ್`ಗಳಿದ್ದು, ಪಾಕಿಸ್ತಾನವೇ ಅವರನ್ನ ಪೋಷಿಸುತ್ತಿದೆ ಎಂದು ಆರೋಪಿಸಿದ್ಧಾರೆ.
ಇಲ್ಲಿನ ಉಗ್ರಗಾಮಿ ಕ್ಯಾಂಪ್`ಗಳಿಗೆ ಪಾಕಿಸ್ತಾನದಿಂದಲೇ ಆಹಾರ, ದಿನಸಿ ಸರಬರಾಜಾಗುತ್ತಿದೆ. ತಿಂದು ಕೊಬ್ಬಿದ ಗ್ರರು ಇಲ್ಲಿನ ಹಳ್ಳಿಗಳನ್ನ ಲೂಟಿ ಮಾಡುತ್ತಿರುವುದಲ್ಲದೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಇಲ್ಲಿನ ಜನ ಆರೋಪಿಸಿದ್ಧಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.