
ಬೆಂಗಳೂರು(ಅ.6): ವಿಧಾನಸೌಧ ಸೇರಿದಂತೆ ರಾಜಧಾನಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಬಿಲಾಲ್‌ಅಹ್ಮದ್ ಕೋಟಾ (45) ಎಂಬಾತನಿಗೆ ಸಿಟಿ ಸಿವಿಲ್ ನ್ಯಾಯಾಲಯ ಜೀವಾವ ಶಿಕ್ಷೆ ನೀಡಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಸಿದಂತೆ 9 ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿದ 56ನೇ ಸೆಷನ್ಸ್ ಕೋರ್ಟ್ ನ್ಯಾಯಾೀಶ ಕೊಟ್ರಯ್ಯ ಎಂ. ಹಿರೇಮಠ ಜೀವಾವ ಶಿಕ್ಷೆ ಮತ್ತು 2.75 ಲಕ್ಷ ದಂಡ ವಿಸಿ ಬುಧವಾರ ಅಂತಿಮ ತೀರ್ಪು ನೀಡಿದರು. ನ್ಯಾಯಾಲಯದ ತೀರ್ಪಿನಿಂದಾಗಿ ಉಗ್ರ ಜೀವನ ಪರ್ಯಂತ ಜೈಲಿನಲ್ಲೇ ಇರಬೇಕಾಗಿದೆ. ಇದಕ್ಕೂ ಮೊದಲು ಸರ್ಕಾರಿ ಪರ ವಕೀಲ ರವೀಂದ್ರ, ‘ಇಮ್ರಾನ್ ಬಿಲಾಲ್ ಭಾರತೀಯ ಪ್ರಜೆ, ವಿದ್ಯಾವಂತ ಮತ್ತು ಪಾಕಿಸ್ತಾನದಲ್ಲಿ ಉಗ್ರ ತರಬೇತಿ ಪಡೆದಿದ್ದಾನೆ.
ರಾಜಕೀಯ ವ್ಯಕ್ತಿಗಳು, ಅಮಾಯಕರ ಹತ್ಯೆಗೆ ಸಂಚು ರೂಪಿಸಿದ್ದ. ಎಲ್‌ಇಟಿ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಆತನ ಬಳಿ ಎಕೆ 47 ಎರಡು ಗನ್, 200 ಸುತ್ತು ಜೀವಂತ ಗುಂಡುಗಳು ಹಾಗೂ 300 ಅಡಿ ದೂರ ಹಾನಿ ಉಂಟು ಮಾಡುವ 10 ಗ್ರೆನೇಡ್‌ಗಳು ಪತ್ತೆ ಆಗಿವೆ. ಹೀಗಾಗಿ ಈತನಿಗೆ ಮರಣ ದಂಡನೆ ಶಿಕ್ಷೆ ವಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಆರೋಪಿ ಪರ ವಕೀಲರು ಸಿ. ಪ್ರವೀಣ್ ಮತ್ತು ವೇಣುಗೋಪಾಲ್ ರಾವ್, ಇಮ್ರಾನ್ ಬಿಲಾಲ್ ದಾಳಿಗೆ ಸಂಚು ರೂಪಿದ್ದನಷ್ಟೇ. ದಾಳಿ ನಡೆಸಿಲ್ಲ. ಮರಣ ದಂಡನೆ ಶಿಕ್ಷೆ ಕೊಡಲು ಯಾವುದೇ ಸೆಕ್ಷನ್‌ನಲ್ಲಿ ಅವಕಾಶವಿಲ್ಲ. 45 ವರ್ಷ ವಯಸ್ಸಾಗಿದ್ದು, ಜೀವಾವ ಶಿಕ್ಷೆ ವಿಸುವಂತೆ ವಾದ ಮಂಡಿದರು.
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.