ಕಾಶ್ಮೀರದಲ್ಲಿ ಜಿಎಸ್ಟಿಗೆ ಭಾರೀ ವಿರೋಧ

Published : Jul 05, 2017, 01:52 PM ISTUpdated : Apr 11, 2018, 12:41 PM IST
ಕಾಶ್ಮೀರದಲ್ಲಿ ಜಿಎಸ್ಟಿಗೆ ಭಾರೀ ವಿರೋಧ

ಸಾರಾಂಶ

ಜಿಎಸ್ಟಿ ಜಾರಿಗೊಳಿಸುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಗ್ತಿದೆ. ಪ್ರತಿಭಟನಾಕಾರರು ವಿಧಾನಸಭೆಯತ್ತ ನುಗ್ಗಲು ಯತ್ನಿಸಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಹೊಸ ತೆರಿಗೆ ನೀತಿ ಅನುಷ್ಠಾನಗೊಳಿಸುವುದು ರಾಜ್ಯದ ವಿಶೇಷ ಸ್ಥಾನ ಮತ್ತು ಅದರ ಹಣಕಾಸಿನ ಸ್ವಾಯತ್ತತೆ ಕಿತ್ತುಕೊಳ್ಳಲಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀನಗರ: ಜಿಎಸ್ಟಿ ಜಾರಿಗೊಳಿಸುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಗ್ತಿದೆ.

ಪ್ರತಿಭಟನಾಕಾರರು ವಿಧಾನಸಭೆಯತ್ತ ನುಗ್ಗಲು ಯತ್ನಿಸಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಹೊಸ ತೆರಿಗೆ ನೀತಿ ಅನುಷ್ಠಾನಗೊಳಿಸುವುದು ರಾಜ್ಯದ ವಿಶೇಷ ಸ್ಥಾನ ಮತ್ತು ಅದರ ಹಣಕಾಸಿನ ಸ್ವಾಯತ್ತತೆ ಕಿತ್ತುಕೊಳ್ಳಲಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಪ್ಪು ಧ್ವಜಗಳನ್ನು ಹಿಡಿದ ಪ್ರತಿಭಟನಾನಿರತರು ಜಿಎಸ್ಟಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಇಲ್ಲಿನ ಜಹಾಂಗೀರ್‌ ಚೌಕದ ವರೆಗೆ ಮೆರವಣಿಗೆ ನಡೆಸಿದ್ದಾರೆ.

ಬಳಿಕ ನಾಗರಿಕ ಸಚಿವಾಲಯದ ಸಂಕೀರ್ಣದತ್ತ ನುಗ್ಗಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಸಚಿವಾಲಯದ ಹೊರಗೆ ಬಂಧಿಸಿದ್ದಾರೆ.

ನಿನ್ನೆ ಜಿಎಸ್ಟಿ ಮಸೂದೆ ಮಂಡನೆ ವೇಳೆ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿತ್ತು.  ಜಿಎಸ್ಟಿ ವಿರೋಧಿಸಿದ ವಿಪಕ್ಷಗಳು ಪ್ರತಿಭಟನೆಗೆ ಮುಂದಾದವು. ಶಾಸಕರು ಒಬ್ಬರನ್ನೊಬ್ಬರು ಎಳೆದಾಡಿಕೊಂಡಿದ್ದು ಸದನದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!
ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್