ಸಂಗೊಳ್ಳಿ ರಾಯಣ್ಣ ಬ್ಯಾಂಕ್ ದಿವಾಳಿ; ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ವಿರುದ್ಧ ಪ್ರತಿಭಟನೆ

By Suvarna Web DeskFirst Published Aug 11, 2017, 1:33 PM IST
Highlights

ಖಡೆ ಬಜಾರ್'ನಲ್ಲಿರುವ ಕಚೇರಿ ಮತ್ತು ಹನುಮಾನ್ ನಗರದ ಬಳಿ ಇರುವ ಮನೆಗೆ ಬ್ಯಾಂಕ್ ಗ್ರಾಹಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಸುಮಾರು 800 ಗ್ರಾಹಕರ 300 ಕೋಟಿಗೂ ಹೆಚ್ಚು ಹಣವನ್ನು ಆನಂದ್​ ಅಪ್ಪಗೋಳ್ ವಂಚಿಸಿದ್ದಾರೆಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಸಂಸ್ಥೆಯ ಹೆಸರಿಗೆ ಆಸ್ತಿ ಮಾಡದೆ ಬ್ಯಾಂಕ್ ಹಣವನ್ನು ತಾವೇ ತೆಗೆದುಕೊಂಡು ಬೇರೆಡೆ ಹಣ ಹೂಡಿಕೆ ಮಾಡಿದ್ದಾರೆ. ಇದರಿಂದ ಸಂಗೊಳ್ಳಿ ರಾಯಣ್ಣ ಬ್ಯಾಂಕ್ ದಿವಾಳಿ ಅಂಚಿಗೆ ಬಂದು ತಲುಪಿದೆ ಎನ್ನಲಾಗಿದೆ.

ಬೆಳಗಾವಿ(ಆ. 11): ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ ಮನೆ ಮತ್ತು ಕಚೇರಿ ಎದುರಿಗೆ ನೂರಾರು ಗ್ರಾಹಕರು ಪ್ರತಿಭಟನೆ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಕೋಆಪರೇಟಿವ್ ಬ್ಯಾಂಕ್'ನಲ್ಲಿ ಠೇವಣಿ ಇಟ್ಟ ಗ್ರಾಹಕರಿಗೆ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಠೇವಣಿ ಅವದಿ ಮುಗಿದು ವರುಷ ಕಳೆದರೂ ಬ್ಯಾಂಕ್ ಎಂಡಿ ಆನಂದ ಅಪ್ಪುಗೋಳ ಹಣ ನೀಡಿಲ್ಲ ಎಂದು ಗ್ರಾಹಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಡೆ ಬಜಾರ್'ನಲ್ಲಿರುವ ಕಚೇರಿ ಮತ್ತು ಹನುಮಾನ್ ನಗರದ ಬಳಿ ಇರುವ ಮನೆಗೆ ಬ್ಯಾಂಕ್ ಗ್ರಾಹಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಸುಮಾರು 800 ಗ್ರಾಹಕರ 300 ಕೋಟಿಗೂ ಹೆಚ್ಚು ಹಣವನ್ನು ಆನಂದ್​ ಅಪ್ಪಗೋಳ್ ವಂಚಿಸಿದ್ದಾರೆಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಸಂಸ್ಥೆಯ ಹೆಸರಿಗೆ ಆಸ್ತಿ ಮಾಡದೆ ಬ್ಯಾಂಕ್ ಹಣವನ್ನು ತಾವೇ ತೆಗೆದುಕೊಂಡು ಬೇರೆಡೆ ಹಣ ಹೂಡಿಕೆ ಮಾಡಿದ್ದಾರೆ. ಇದರಿಂದ ಸಂಗೊಳ್ಳಿ ರಾಯಣ್ಣ ಬ್ಯಾಂಕ್ ದಿವಾಳಿ ಅಂಚಿಗೆ ಬಂದು ತಲುಪಿದೆ ಎನ್ನಲಾಗಿದೆ. ಇದರಿಂದ ಬಡ ಗ್ರಾಹಕರು ಕಂಗಾಲಾಗಿದ್ದು ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ವಿರುದ್ದ ಹರಿಹಾಯ್ದಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿ ನಮ್ಮ ಹಣವನ್ನು ಕೊಡಿಸಬೇಕೆಂದು ಈ ಗ್ರಾಹಕರು ಆಗ್ರಹಿಸಿದ್ದಾರೆ.

click me!