
ಬೆಂಗಳೂರು: ಸದಾಶಿವನಗರ ಸಮೀಪ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದ ಆರೋಪ ಮೇಲೆ ‘ಸ್ಪಾ'ದಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜೆನ್ನಿ (25), ಸಿರಾಜುದ್ದೀನ್(38), ಅಂಗ್‌ಚುಕುಲ್(28), ಹಸನ್ ಬಾವೂರ್(38), ಸೆಂಥಿಲ್ ಕುಮಾರ್(41) ಹಾಗೂ ಅಭಿಜಿತ್ (44) ಬಂಧಿತರು. ಮೂವರು ವಿದೇಶಿಯರು ಸೇರಿದಂತೆ 6 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ. . 1,28,405 ನಗದು, 8 ಮೊಬೈಲ್, ಎರಡು ಸ್ವೈಪಿಂಗ್ ಮಿಷನ್, ಕಂಪ್ಯೂಟರ್ ಡಿವಿಆರ್, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಆರ್'ಎಂವಿ ಎಕ್ಸ್'ಟೆನ್ಷನ್'ನಲ್ಲಿ ‘ಶಿವಾಯಿ ತಾಹಿ ಸ್ಪಾ' ಹೆಸರಿನ ಮಜಾಸ್ ಪಾರ್ಲರ್‌ಲ್ಲಿ ಥೈಲ್ಯಾಂಡ್ ಮತ್ತು ನಾಗಲ್ಯಾಂಡ್'ನಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದರು. ಈ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮಸಾಜ್ ಪಾರ್ಲರ್‌ನ ಮಾಲೀಕ ಮಧುಸೂದನ್ ಮತ್ತು ಪ್ರಿನ್ಸ್ ಗುಪ್ತಾ ಪರಾರಿಯಾಗಿದ್ದಾರೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.