ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ!

By Web DeskFirst Published Dec 12, 2018, 9:52 AM IST
Highlights

ಭಾರೀ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಮಿಜೋರಾಂನಲ್ಲಿ ಕೈ ಪಕ್ಷವನ್ನು ಸೋಲಿಸಿರುವ ಮಿಜೋ ನ್ಯಾಷನಲ್‌ ಫ್ರಂಟ್‌ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಸದ್ಯ ಪಕ್ಷದಿಂದ ನಿಯೋಜಿತ ಮುಖ್ಯಮಂತ್ರಿ ಝೋರಾಂಥಂಗಾ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೊಳಿಸುತ್ತೇನೆ ಎಂದಿದ್ದಾರೆ.

ಮಿಜೋರಾಂ.[ಡಿ.12]: ಮಿಜೋರಾಂನಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಿಜೋ ನ್ಯಾಷನಲ್‌ ಫ್ರಂಟ್‌ ಪಕ್ಷದ ನಿಯೋಜಿತ ಮುಖ್ಯಮಂತ್ರಿ ಝೋರಾಂಥಂಗಾ ಅವರು, ತಾವು ನೀಡಿದ ಚುನಾವಣೆ ಭರವಸೆಯಂತೆ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೊಳಿಸುತ್ತೇನೆ ಎಂದು ಪ್ರಕಟಿಸಿದ್ದಾರೆ.

'ಕೈ'ನಿಂದ 5 ಬಾರಿ ಸಿಎಂ: 2 ಕ್ಷೇತ್ರದಲ್ಲೂ ಸೋಲಿಸಿದ ಮತದಾರ!

ಅತಿಹೆಚ್ಚು ಸಾಕ್ಷರತೆ ಮತ್ತು ಕ್ರೈಸ್ತ ಸಮುದಾಯವನ್ನು ಹೊಂದಿರುವ ಮಿಜೋರಾಂನಲ್ಲಿ 1997ರಲ್ಲೇ ಆಗಿನ ಕಾಂಗ್ರೆಸ್‌ ಸರ್ಕಾರ, ಮದ್ಯಪಾನದ ಮೇಲೆ ನಿಷೇಧ ಹೇರಿತ್ತು. ಆದಾಗ್ಯೂ, 2014ರ ಮದ್ಯಪಾನ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುವ ಮೂಲಕ 2015ರಲ್ಲಿ ಮದ್ಯಪಾನದ ಮೇಲಿನ ಸಂಪೂರ್ಣ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಇದರ ನಂತರ, ರಾಜ್ಯಾದ್ಯಂತ ಮದ್ಯದ ಅಂಗಡಿಗಳು ತಲೆ ಎತ್ತಿದ್ದವು.

ಕಾಂಗ್ರೆಸ್ ಮುಕ್ತ ಭಾರತ ಕನಸಿಗೆ ತಣ್ಣೀರು, ಬಿಜೆಪಿ ಕಣ್ಣೀರು !

ಸದ್ಯ ಪಕ್ಷದಿಂದ ನಿಯೋಜಿತ ಮುಖ್ಯಮಂತ್ರಿ ಝೋರಾಂಥಂಗಾ ಪ್ರಕಟನೆ ಭಾರೀ ಚರ್ಚೆ ಮೂಡಿಸಿದೆ.

click me!