ಗೆದ್ದಿರುವ ಕಾಂಗ್ರೆಸ್‌ಗೆ ಈಗ ಹೊಸ ತಲೆನೋವು!

By Web DeskFirst Published Dec 12, 2018, 9:14 AM IST
Highlights

ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಆದರೀಗ ಗೆಲುವಿನ ಬೆನ್ನಲ್ಲೇ ಹೊಸ ತಲೆನೋವು ಎದುರಾಗಿದೆ. ಅಷ್ಟಕ್ಕೂ ಅದೇನು ಅಂತೀರಾ? ಇಲ್ಲಿದೆ ವಿವರ

ನವದೆಹಲಿ[ಡಿ.12]: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಹಿಡಿದ ಜೆಡಿಎಸ್‌ ಸರ್ಕಾರ ಇನ್ನೂ ಅದನ್ನು ಈಡೇರಿಸಲು ತಿಣುಕಾಡುತ್ತಿರುವ ಬೆನ್ನಲ್ಲೇ ಈಗ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಅದೇ ಭರವಸೆ ನೀಡಿ ಗೆದ್ದಿರುವ ಕಾಂಗ್ರೆಸ್‌ ಪಕ್ಷಕ್ಕೆ ಸಾಲಮನ್ನಾದ ತಲೆನೋವು ಆರಂಭವಾಗಲಿದೆ.

'ಕೈ ಮುಕ್ತ ಭಾರತಕ್ಕೆ ಕೈ ಹಾಕಿ ತಾವೇ ಮುಕ್ತರಾಗುತ್ತಿದ್ದಾರೆ'

ಈ ಮೂರೂ ರಾಜ್ಯಗಳಲ್ಲಿ ಪ್ರಚಾರದ ವೇಳೆ ಸ್ವತಃ ರಾಹುಲ್‌ ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ದಿನಗಳಲ್ಲಿ ರೈತರ 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಅದರ ನಂತರ ಈ ರಾಜ್ಯಗಳಲ್ಲಿ ರೈತರು ಸಾಲದ ಕಂತು ಕಟ್ಟುವುದನ್ನೇ ಬಹುತೇಕ ಬಿಟ್ಟುಬಿಟ್ಟಿದ್ದರು. ಈಗ ಕಾಂಗ್ರೆಸ್‌ ಗೆದ್ದಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳು ದೊಡ್ಡ ರಾಜ್ಯಗಳಾಗಿದ್ದು, ರೈತರ ಸಂಖ್ಯೆಯೂ ಅಲ್ಲಿ ಜಾಸ್ತಿಯಿದೆ ಮತ್ತು ಅವರ ಸಾಲದ ಪ್ರಮಾಣವೂ ಹೆಚ್ಚೇ ಇದೆ.

ತೆಲಂಗಾಣದಲ್ಲಿ ನಡೆಯಲಿಲ್ಲ ಡಿಕೆಶಿ ಆಟ: ಟ್ರಬಲ್ ಶೂಟರ್ ಆಸೆಗೆ KCR ತಣ್ಣೀರು!

ಅದು ಎಷ್ಟುಎಂಬುದನ್ನು ಇನ್ನಷ್ಟೇ ಸರ್ಕಾರ ಲೆಕ್ಕಹಾಕಬೇಕಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ಇದೀಗ ಆರು ತಿಂಗಳಾದರೂ ಭರವಸೆ ಈಡೇರಿಸಲು ಕಷ್ಟಪಡುತ್ತಿದ್ದಾರೆ. ಅವರ ಮಿತ್ರಪಕ್ಷವಾದ ಕಾಂಗ್ರೆಸ್‌ ಆ ತಲೆನೋವು ತನಗೆ ಸಂಬಂಧವಿಲ್ಲ ಎಂಬಂತೆ ದೂರವಿದೆ. ಆದರೆ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಸ್ವತಃ ಕಾಂಗ್ರೆಸ್‌ ಸರ್ಕಾರವೇ ರೈತರ ಸಾಲಮನ್ನಾ ಮಾಡಬೇಕಿದೆ. ರಾಹುಲ್‌ ಗಾಂಧಿ ನೀಡಿರುವ ಭರವಸೆಯನ್ನು ಈಡೇರಿಸುವ ಸಂಕಷ್ಟಕ್ಕೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಸಿಲುಕಲಿದ್ದಾರೆ.

click me!