
ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಮಹಿಷಾ ದಸರಾ (ಮೂಲನಿವಾಸಿಗಳ ಮಹಿಷಾ ಸಾಂಸ್ಕೃತಿಕ ಹಬ್ಬ) ಆಚರಿಸಲಾಯಿತು.
ಮಹಿಷಾ ದಸರಾ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕ ಎ.ಕೆ. ಸುಬ್ಬಯ್ಯ, ವೈದಿಕಶಾಹಿ ಶಕ್ತಿಗಳು ದೇಶದ ನೈಜ ಇತಿಹಾಸವನ್ನು ಮರೆಮಾಚಿದ್ದು, ಆ ಮೂಲಕ ಜನರ ವಿಚಾರ ಶಕ್ತಿಗೆ ಬೇಲಿ ಹಾಕಿದ್ದಾರೆ. ವೈದಿಕಶಾಹಿ ವೈಭವೀಕರಣದ ಮೈಸೂರು ದಸರಾ ಬದಲು ಮಹಿಷಾ ದಸರಾವನ್ನು ನಾಡ ಹಬ್ಬವಾಗಿ ಸರ್ಕಾರ ಆಚರಿಸಬೇಕು ಎಂದರು.
ಪತ್ರಿಕೋದ್ಯಮ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಮಾತನಾಡಿ, ಮಹಿಷಾ ರಾಕ್ಷಸನಲ್ಲ, ರಕ್ಷಕ. ಮೈಸೂರಿನ ಕೋಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ವೃತ್ತದಲ್ಲಿ ಮಹಿಷಾಸುರರ ಪ್ರತಿಮೆ ಸ್ಥಾಪಿಸಬೇಕು. ಮೈಸೂರು ವಿವಿಗೆ ಮಹಿಷಾ ವಿವಿ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.