
ಮೈಸೂರು(ಸೆ.24): ಈ ಬಾರಿಯ ದಸರಾ ಆಕರ್ಷಣೆಗೆ ಪ್ರವಾಸಿಗರಿಗಾಗಿ ಹೆಲಿ ರೈಡ್ ಆಯೋಜಿಸಲಾಗಿದೆ. ಇದರಿಂದ ಜನರು ಕೂಡ ಫುಲ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಇದೇ ಹೆಲಿ ರೈಡ್ ನಿಂದ ಈಗ ಸಂಕಷ್ಟ ಉಂಟಾಗಿದೆ. ಯೆಸ್, ಹೆಲಿ ರೈಡ್ ದಸರಾ ಜಂಬೂಸವಾರಿ ಆನೆಗಳಿಗೆ ಗಾಬರಿ ಹಾಗೂ ಆತಂಕವನ್ನು ತಂದೊಡ್ಡುತ್ತಿದೆ. ನಿತ್ಯ 2 ಕಾಪ್ಟರ್‌ಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಹಾರಾಟ ನಡೆಸಿ ಜನರಿಗೆ ಖುಷಿ ನೀಡುತ್ತಿವೆಯಾದರೂ, ಅರಮನೆ ಬಳಿ ಬಂದಾಗ ಅವು ಮಾಡುವ ಜೋರು ಶಬ್ದದಿಂದಾಗಿ, ಆನೆಗಳು ಗಾಬರಿ ಭೀಳುತ್ತಿವೆ. ಇದರಿಂದ ಜಂಬೂ ಸವಾರಿ ಮೇಲೂ ಪರಿಣಾಮ ಭಿರುತ್ತದೆ ಎನ್ನುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಹೆಲಿರೈಡ್ ಮಾರ್ಪಾಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ದಸರಾ ಉದ್ಘಾಟನೆಗೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಮಾಡಲು ಆರಂಭಿಸಿದ್ದಾಗ, ಜಂಬೂ ಸವಾರಿಯ ಆನೆಗಳೆಲ್ಲ ಬೆದರಿ ಎಲ್ಲೆಂದರಲ್ಲಿ ಓಡಲು ಆರಂಭಿಸಿದ್ದವು. ಹೀಗಾಗಿ ಅಪರಿಚಿತ ಶಬ್ದವನ್ನು ಆನೆಗಳು ಸಹಿಸಿಕೊಳ್ಳುವುದಿಲ್ಲವಾದ್ದರಿಂದ, ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಹೀಗಾಗಿ ಹೆಲಿರೈಡ್ ನಿಲ್ಲಿಸುವುದು ಒಳಿತು ಎನ್ನುವುದು ಆನೆಗಳ ವೈದ್ಯ ನಾಗರಾಜ್ ಆಗ್ರಹಿಸಿದ್ದಾರೆ.
ಒಟ್ಟಾರೆ ಆನೆಗಳು ಅತಿ ಸೂಕ್ಷ್ಮ ಜೀವಿಗಳಾಗಿದ್ದು, ಹೊಸದಾಗಿ ಉಂಟಾಗುವ ಶಬ್ಧಗಳಿಗೆ ಅವು ಬೇಗನೇ ರಿಯಾಕ್ಟ್ ಮಾಡುತ್ತವೆ. ಜಂಬೂ ಸವಾರಿಯಲ್ಲಿ ಲಕ್ಷಾಂತರ ಜನರ ನಡುವೆ ಆನೆಗಳು ಸಾಗಬೇಕಾಗಿರುವುದರಿಂದ ಅಧಿಕಾರಿಗಳು ಹೆಲಿ ರೈಡ್ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.