ಜಯಾ ಸಾವಿಗೆ 'ಮರುಜೀವ'

By Suvarna Web DeskFirst Published Oct 30, 2017, 3:01 PM IST
Highlights

ಜಯಾ ಸಾವಿನ ತನಿಖೆ ಆರಂಭ

ಜಯಾ ನಿವಾಸಕ್ಕೆ  ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರ್ಮುಗಸ್ವಾಮಿ ಭೇಟಿ

ಕಳೆದ ಡಿಸೆಂಬರ್ 5 ರಂದು ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ  ಜಯಾ

ಚೆನ್ನೈ: ಕಳೆದ  ಡಿ.5ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಾಲಲಿತಾ ಅವರ ಸಾವಿನ ತನಿಖೆಯು ಆರಂಭಗೊಂಡಿದೆ.

ತನಿಖೆಯ ಭಾಗವಾಗಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರ್ಮುಗಸ್ವಾಮಿ ಇಂದು ಪೊಯಸ್ ಗಾರ್ಡನ್’ನಲ್ಲಿರುವ ಜಯಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. 2016ರಲ್ಲಿ ಸಾವಿಗೂ ಮುನ್ನಾ ಜಯಾ ಇದೇ ನಿವಾಸದಲ್ಲಿ ವಾಸವಿದ್ದರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಾಲಲಿತಾ ಸಾವಿನ ತನಿಖೆ ನಡೆಸುವುದಾಗಿ ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರ ಕಳೆದ ಆಗಸ್ಟ್’ನಲ್ಲಿ ಘೋಷಿಸಿತ್ತು. ಆ ಬಳಿಕ ಸೆಪ್ಟಂಬರ್ ತಿಂಗಳಿನಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರ್ಮುಗಸ್ವಾಮಿ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿ ಅದರ ಹೊಣೆಯನ್ನು ನೀಡಲಾಗಿತ್ತು.

ಜಯಾಲಲಿತಾರ ಚಿಕಿತ್ಸೆ ಹಾಗೂ ಸಾವಿನ ಬಗ್ಗೆ ಎಲ್ಲಾ ಸಚಿವರು ಸುಳ್ಳು ಹೇಳುತ್ತಿದ್ದಾರೆ, ಜಯಾಗೆ ನೋಡಲು ಕೇವಲ ಆಕೆಯ ಆಪ್ತೆ ವಿ, ಶಶಿಕಲಾ ಮತ್ತು ಆಕೆಯ ಕುಟುಂಬಸ್ಥರಿಗೆ ಮಾತ್ರ ಅವಕಾಶವಾವಿತ್ತು ಎಂದು ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಆರೋಪಿಸಿದ್ದರು.

ಅಮ್ಮಾ ಸಾವಿನ ತನಿಖೆಯಾಗಬೇಕೆಂದು ವ್ಯಾಪಕವಾಗಿ ಮನವಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದರು. ಕಳೆದ ವರ್ಷ ಸೆಪ್ಟೆಂಬರ್ 22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 5 ರಂದು ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರು.

click me!