ಇಸ್ಲಾಮಾಬಾದ್’ನಲ್ಲಿ ಭಾರತ ಪರ ಪೋಸ್ಟರ್: ಇಮ್ರಾನ್’ಗೆ ಮೋದಿ ಬೌನ್ಸರ್!

By Web DeskFirst Published Aug 7, 2019, 4:11 PM IST
Highlights

ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕನಸು ದೂರವಿಲ್ಲ?| ಇಸ್ಲಾಮಾಬಾದ್’ನಲ್ಲಿ ರಾರಾಜಿಸುತ್ತಿದೆ ಭಾರತ ಪರ ಪೋಸ್ಟರ್| ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೆ ಬೆಂಬಲ| ಮಹಾ ಭಾರತ ಅಡಿಬರಹ ನೀಡಿ ಇಸ್ಲಾಮಾಬಾದ್’ನಲ್ಲಿ ಪೋಸ್ಟರ್| ಪಾಕಿಸ್ತಾನ ವಿಘಟನೆಗೆ ಕಾರಣವಾಗಲಿದೆ ಮೋದಿ ಸರ್ಕಾರದ ನಿರ್ಣಯ| 

ಇಸ್ಲಾಮಾಬಾದ್(ಆ.07): ಪಾಕಿಸ್ತಾನದ ನೆಲದಲ್ಲಿ ತ್ರಿವರ್ಣ ಧಜ ಹಾರಿಸುವ ರಾಷ್ಟ್ರವಾದಿಗಳ ಕನಸು ನನಸಾಗುವ ದಿನ ದೂರವಿಲ್ಲ ಎನಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಕ್ರಮ ಪಾಕಿಸ್ತಾನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಭಾರತದ ನಿರ್ಧಾರಕ್ಕೆ ಪಾಕಿಸ್ತಾನದಲ್ಲೂ ಬೆಂಬಲ ವ್ಯಕ್ತವಾಗಿದ್ದು, ನಿರ್ಧಾರ ಬೆಂಬಲಿಸಿ ಪಾಕ್ ರಾಜಧಾನಿ ಇಸ್ಲಾಮಾಬಾದ್’ನಲ್ಲಿ ಭಾರತದ ಪರ ಪೋಸ್ಟರ್’ಗಳನ್ನು ಅಂಟಿಸಲಾಗಿದೆ.

ವಿಶೇಷ ಸ್ಥಾನಮಾನ ರದ್ದತಿ ಕುರಿತು ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಶಿವಸೇನೆ ಸಂಸದ ಸಂಜಯ್ ರಾವತ್ ಮಾತನಾಡಿದ್ದರು. ಮೋದಿ ಸರ್ಕಾರ pOK, ಬಲೂಚಿಸ್ಥಾನಗಳನ್ನೂ ವಶಪಡಿಸಿಕೊಳ್ಳಲಿದೆ ಎಂದು ರಾವತ್ ಭರವಸೆ ವ್ಯಕ್ತಪಡಿಸಿದ್ದರು.

ಇದರ ಪೋಸ್ಟರ್’ನ್ನು ಇಸ್ಲಾಮಾಬಾದ್’ನ ಮಹಾ ಭಾರತ ಎಂಬ ಅಡಿಬರಹ ನೀಡಿ ಪ್ರಮುಖ ರಸ್ತೆಗಳಲ್ಲಿ ಅಂಟಿಸಲಾಗಿದ್ದು, ಭಾರತದ ನಿರ್ಣಯ ಪಾಕಿಸ್ತಾನದ ವಿಘಟನೆಗೆ ಕಾರಣವಾಗಲಿದೆ ಎಂಬರ್ಥದಲ್ಲಿ ವಿಶ್ಲೇಷಿಸಲಾಗಿದೆ.

click me!