
ಮೈಸೂರು (ಜ.27): ವಿವಾದಕ್ಕೆ ಕಾರಣವಾಗಿದ್ದ ಹುಣಸೂರು ಹನುಮ ಜಯಂತಿ ಮೆರವಣಿಗೆಗೆ ಹಿಂದೂಪರ ಸಂಘಟನೆಗಳಿಂದ ಸಿದ್ಧತೆ ನಡೆದಿದೆ.
ಹಿಂದೂಪರ ಸಂಘಟನೆಗಳ ಬೇಡಿಕೆಯಂತೆಯೇ ಜಿಲ್ಲಾಡಳಿತ ಮಾರ್ಗ ನಿಗದಿ ಮಾಡಿದೆ. ದೇವಸ್ಥಾನ ಕಲ್ಕುಣಿಕೆ ವೃತ್ತ, ಹಳೇ ಬಸ್ ನಿಲ್ದಾಣದಲ್ಲಿ ಮೆರವಣಿಗೆ ಸಂಚರಿಸಲಿದ್ದು ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸಿ ಮಂಜುನಾಥ ದೇವಾಲಯ ಆವರಣದಲ್ಲಿ ಮುಕ್ತಾಯವಾಗಲಿದೆ.
ಕಳೆದ ತಿಂಗಳು ಗಲಾಟೆ ನಡೆದಿದ್ದರಿಂದ ಹನುಮ ಜಯಂತಿ ಮೆರವಣಿಗೆ ನಡೆದಿರಲಿಲ್ಲ. ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಹನುಮ ಜಯಂತಿಗೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಕಳೆದ ಬಾರಿ ಮಂಜುನಾಥ ದೇವಸ್ಥಾನಕ್ಕೆ 1 ಕಿ. ಮೀ. ದೂರ ಮೆರವಣಿಗೆ ನಿಗದಿಯಾಗಿತ್ತು. ಆದರೆ ಈ ಬಾರಿ ಹನುಮ ಜಯಂತಿ ಮೆರವಣಿಗೆ 5 ಕಿಲೋ ಮೀಟರ್ ಸಾಗಲಿದೆ. ಬೆಳಿಗ್ಗೆ 11 ಗಂಟೆಗೆ ಪ್ರತಾಪ್ ಸಿಂಹ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳಿಂದ ಮೆರವಣಿಗೆಗೆ ಚಾಲನೆ ಸಿಗಲಿದೆ.
ಮೊದಲ ಬಾರಿ ಹನುಮ ಜಯಂತಿ ಗದ್ದಲ ಹಿನ್ನಲೆಯಲ್ಲಿ ಎರಡನೇ ಬಾರಿ ಹನುಮ ಜಯಂತಿಗೆ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಇಬ್ಬರು ಎಸ್ಪಿ, ನಾಲ್ವರು ಡಿವೈಎಸ್ಪಿ, ಹತ್ತು ಸಿಪಿಐ, ಇಪ್ಪತೈದು ಪಿಎಸ್ ಐ, ಎಪ್ಪತೈದು ಎಎಸ್ , 500 ಹೆಚ್'ಸಿಪಿಸಿ, 200 ಹೋಂ ಗಾರ್ಡ್ರನ್ನು ನಿಯೋಜಿಸಲಾಗಿದೆ. 8 ಕೆಎಸ್'ಆರ್'ಪಿ ತುಕಡಿ, 15. ಡಿಎಆರ್,31 ಪೆಟ್ರೋಲಿಯಂ ವಾಹನ ಬಳಕೆ ಮಾಡಲಾಗಿದೆ.
ಮೆರವಣಿಗೆ ಸುತ್ತಲೂ ಕ್ಯಾಮರಾ ಹದ್ದಿನ ಕಣ್ಣಿಡಲಾಗಿದೆ. 51 ವಿಡಿಯೋ ಗ್ರಾಫರ್'ಗಳ ಬಳಕೆ, 80 ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.