
ಪ್ರಿಯಾಮಣಿ, ಕನ್ನಡ, ತೆಲಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ನಟಿಸಿ ಬಹುಬಾಷ ನಟಿ ಅಂತ ಖ್ಯಾತಿ ಪಡೆದವರು. ಆಕ್ಟಿಂಗ್ ಗೂ ಸೈ, ಡ್ಯಾನ್ಸಿಂಗ್ ಗೂ ಸೈ ಅಂತ ತೆರೆಮೇಲೆ ಹಾಡು ಕುಣಿದ್ದು, ಸಿನಿಪ್ರೇಕ್ಷಕರ ಹೃದಯಕ್ಕೆ ಕನ್ನಡಿ ಹಿಡಿದವರು. ಕನ್ನಡದ ಪುನಿತ್ ಜೊತೆಗಿನ ರಾಮ್, ಸುದೀಪ್ ಜೊತೆಗಿನ ವಿಷ್ಣು ವರ್ಧನ, ದರ್ಶನ್ ಜೊತೆಗಿನ ಅಂಬರೀಷ ಹೀಗೆ ಬೆಂಗಳೂರಿನ ಈ ಬಾಲೆ ಕನ್ನಡದ ಹಲವು ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದಿರುವ ಪ್ರಿಯಾಮಣಿ ಈಗ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಮುಂಬೈ ಉದ್ಯಮಿ ಜೊತೆ ಮದುವೆ
ಮುಸ್ತಾಫ ರಾಜ್ ಮೂಲತ ಮುಂಬೈನವರು. ದೊಡ್ಡ ಉದ್ಯಮಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಿಂದಿನ ಪ್ರಮುಖ ವ್ಯಕ್ತಿ ಮುಸ್ತಾಫ ರಾಜ್. ಪ್ರಿಯಾಮಣಿಗೆ ಮುಸ್ತಾಫ್ ರಾಜ್ ಪರಿಚಯವಾಗಿದ್ದು ಸಿಸಿ'ಎಲ್'ನಲ್ಲಿ .
ಜಯನಗರದ ಸಬ್ ರಿಜಿಸ್ಟರ್ ಆಫೀಸ್'ನಲ್ಲಿ
ನಟಿ ಪ್ರಿಯಾಮಣಿ ಇಂದು ಜಯನಗರದ ಸಬ್ ರಿಜಿಸ್ಟರ್ ಕಚೇರಿ'ಯಲ್ಲಿ ಮುಸ್ತಾಫ್ ರಾಜ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಾಳೆ ಆಗಸ್ಟ್ 24 ರಂದು ಬೆಂಗಳೂರಿನ ಜೆ.ಪಿ.ನಗರದ ಯಲೇನ್ ಕನ್ವೇಷನ್ ಸೆಂಟರ್ ನಲ್ಲಿ ರಿಸೆಪ್ಶನ್ ಏರ್ಪಡಿಸಿದ್ದಾರೆ. ಸದ್ಯ ಮದುವೆ ರಿಸೆಪ್ಷನ್'ಗೆ ಚಿತ್ರರಂಗದ ಕಲಾವಿದರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗುವ ಸಾದ್ಯತೆಗಳಿವೆ.
ರಾಷ್ಟ್ರಪ್ರಶಸ್ತಿ ವಿಜೇತ ಬಹುಭಾಷಾ ನಟಿ ಪ್ರಿಯಾಮಣಿ ಅವರು ತಮ್ಮ ಮುದವೆ ನಂತರವೂ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರೆ. ಮದುವೆ ಆಗಿ 2 ದಿನದಲ್ಲೇ ಮತ್ತೆ ಚಿತ್ರಿಕರಣದಲ್ಲಿ ಭಾಗಿಯಾಗಲ್ಲಿದ್ದಾರೆ. ಒಟ್ಟಾರೆ ಪ್ರಿಯಾಮಣಿ ಮದುವೆ ಒಂದಷ್ಟು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನೊಂದಿಷ್ಟು ಅಭಿಮಾನಿಗಳಿಗೆ ಪ್ರಿಯಾಮಣಿ ಎಂಗೆಜ್ ಹಾರ್ಟ್'ನ್ನು ಡ್ಯಾಮೆಜ್ ಮಾಡಿದೆ.
- ಶೃತಿ ಪಾಟೀಲ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.