ದಕ್ಷಿಣ ಭಾರತದಲ್ಲಿಯೂ ಖಾಸಗಿ ರೈಲು ಸಂಚಾರ: ಸುಳಿವು ಕೊಟ್ಟ ಕೇಂದ್ರ ಸಚಿವ

By Web DeskFirst Published Oct 7, 2019, 6:12 PM IST
Highlights

ದಕ್ಷಿಣ ಭಾರತದಲ್ಲಿಯೂ ಖಾಸಗಿ ರೈಲು ಸಂಚಾರ/ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆ/ ಆಸಕ್ತರು ಮುಂದೆ ಬಂದರೆ ಎಲ್ಲ ಸಹಕಾರ ನೀಡಲು ಸಿದ್ಧ

ಬೆಳಗಾವಿ[ಅ. 07]  ದಕ್ಷಿಣ ಭಾರತದಲ್ಲಿಯೂ ಖಾಸಗಿ ರೈಲು ಸಂಚಾರ ಆರಂಭವಾಗಲಿದೆಯಾ? ಹೀಗೊಂದು ಸೂಚನೆಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರೇ ನೀಡಿದ್ದಾರೆ.

"

ಬೆಳಗಾವಿಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಉತ್ತರ ಭಾರತದಲ್ಲಿ ದೆಹಲಿ- ಲಕ್ನೋ ಮಧ್ಯೆ ತೇಸಜ್ ಖಾಸಗಿ ರೈಲು ಸಂಚರಿಸುತ್ತಿದೆ. ಅದೇ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ಖಾಸಗಿ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ರೈಲು ಡಿಕ್ಕಿ: ನರಳುತ್ತಲೇ ಪ್ರಾಣಬಿಟ್ಟ ಗಜರಾಜ.. ಕಣ್ಣೀರ ವಿಡಿಯೋ...

ಆಸಕ್ತರು ಮುಂದೆ ಬಂದ್ರೆ ಅವರಿಗೆ ಸಂಪೂರ್ಣ ಸಹಕಾರ ರೈಲ್ವೆ ಇಲಾಖೆಯಿಂದ ದೊರೆಯಲಿದೆ. ಸರ್ಕಾರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಪ್ರವಾಹಕ್ಕೆ ಕೇಂದ್ರದಿಂದ ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ.ರಾಜ್ಯ ನಾಯಕರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಬರುವ ದಿನಗಳಲ್ಲಿ ಕೂಡ ಕೇಂದ್ರದಿಂದ ಹೆಚ್ಚಿನ ‌ಪರಿಹಾರ ಬಿಡುಗಡೆ ಆಗಲಿದೆ ಎಂದು ವಿಶ್ವಾಸ ವ್ಯಕ್ಪಡಿಸಿದರು.

ಕರ್ನಾಟಕ 25 ಸಂದರನ್ನು ಬಿಜೆಪಿಯಿಂದ ಆರಿಸಿ ಕಳಿಸಿದ್ದರೂ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂಬ ಕೂಗು ಸೋಶಿಯಲ್ ಮೀಡಿಯಾ ಸೇರಿದಂತೆ ಜನರಿಂದ ಎದ್ದಿತ್ತು. ಅಂತಿಮವಾಗಿ ಬಿಹಾರದೊಂದಿಗೆ ಕರ್ನಾಟಕವನ್ನು ಸೇರಿಸಿಕೊಂಡ  ಕೇಂದ್ರ ಸರ್ಕಾರ 1200 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ. 

 

click me!