
ಬೆಂಗಳೂರು(ಡಿ.14): ಸನ್ನಡತೆ ಮೇರೆಗೆ ಬಿಡುಗಡೆಗೊಂಡ ಕೊಲೆ ಪ್ರಕರಣದ ಕೈದಿ ಬಾಗೇಪಲ್ಲಿ ತಾಲೂಕಿನ ಎಂ.ಎಸ್.ನರಸಿಂಹ ರೆಡ್ಡಿ ಅವರು ಹದಿನಾಲ್ಕು ವರ್ಷಗಳ ಸೆರೆಮನೆ ವಾಸದಲ್ಲಿ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ. 2003ರಲ್ಲಿ ಜೈಲು ಸೇರಿದ ರೆಡ್ಡಿ ಅವರ ಉತ್ತಮ ನಡವಳಿಕೆ ಗಮನಿಸಿದ ಅಧಿಕಾರಿಗಳು, ಕಾರಾಗೃಹದ ಆವರಣದಲ್ಲಿರುವ ಗ್ರಂಥಾಲಯ ವಿಭಾಗಕ್ಕೆ ಅವರಿಗೆ ಕೆಲಸಕ್ಕೆ ನಿಯೋಜಿಸಿದ್ದರು.
ಈ ವೇಳೆ ರೆಡ್ಡಿ, ಬಿಡುವಿನ ಸಮಯ ಸದುಪಯೋಗ ಪಡಿಸಿಕೊಂಡು ಪದವಿ ಗಳಿಸಿದ್ದಾರೆ. ಪತ್ರಿಕೋದ್ಯಮ, ಅರ್ಥಶಾಸ್ತ್ರ ಹಾಗೂ ಇತಿಹಾಸ ವಿಷಯಗಳಲ್ಲಿ ಬೆಂಗಳೂರು ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ, ನನ್ನ ಪ್ರೇರೇಪಣೆಯಿಂದ ಮಗ ಈಗ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.