ಕರುಣಾನಿಧಿ ಅಂತಿಮ ದರ್ಶನ ಪಡೆದ ಮೋದಿ!

By Web DeskFirst Published Aug 8, 2018, 11:39 AM IST
Highlights

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ನಿಧನ ಹಿನ್ನೆಲೆ! ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ! ಚೆನ್ನೈನ ರಾಜಾಜಿ ಹಾಲ್ ನಲ್ಲಿ ಅಂತಿಮ ದರ್ಶನ  

ಚೆನ್ನೈ(ಆ.8): ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ನಿಧನರಾಧ ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

Prime Minister Narendra Modi pays last respects to former CM M at Chennai's Rajaji Hall. pic.twitter.com/IlO5LpP93F

— ANI (@ANI)

ಕರುಣಾನಿಧಿ ಪ್ರಾರ್ಥೀವ ಶರೀರವನ್ನು ಚೆನ್ನೈನ ರಾಜಾಜಿ ಹಾಲ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ರಾಜಾಜಿ ಹಾಲ್ ಗೆ ಬಂದ ಪ್ರಧಾನಿ, ಕರುಣಾನಿಧಿ ಅಂತಿಮ ದರ್ಶನ ಪಡೆದರು.

Tamil Nadu: Prime Minister Narendra Modi talks to MK Stalin and Kanimozhi after paying last respects to M at Chennai's Rajaji Hall. pic.twitter.com/Mm0aU6FdiW

— ANI (@ANI)

ಈ ವೇಳೆ ಕರುಣಾನಿಧಿ ಪುತ್ರ ಎಂ.ಕೆ. ಸ್ಟಾಲಿನ್, ಪುತ್ರಿ ಕನಿಮೋಳಿ ಅವರನ್ನು ಸಂತೈಸಿದ ಮೋದಿ, ಕುಟುಂಬದ ದು:ಖದಲ್ಲಿ ತಾವೂ ಭಾಗಿಯಾಗಿರುವುದಾಗಿ ತಿಳಿಸಿದರು.  ಪ್ರಧಾನಿ ಮೋದಿ ಜೊತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ  ಸೀತಾರಾಮನ್ ಕೂಡ ಜೊತೆಗಿದ್ದರು.

click me!