
ನವದೆಹಲಿ: ಹದಿಹರೆಯದ ಮಕ್ಕಳನ್ನು ಆತ್ಮಹತ್ಯೆಗೆ ದೂಡುವ ಅಪಾಯಕಾರಿ ಆಟ ‘ಬ್ಲೂವೇಲ್ ಚಾಲೆಂಜ್’ ಹಳತಾಯಿತು. ಈಗ ಮತ್ತೊಂದು ಡೇಂಜರಸ್ ಆಟ ಆನ್‌ಲೈನ್‌ನಲ್ಲಿ ಪ್ರತ್ಯಕ್ಷವಾಗಿದೆ. ಅದರ ಹೆಸರು- ಮೋಮೋ ಚಾಲೆಂಜ್. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆ್ಯಪ್ ಮೂಲಕ ಈ ಹೊಸ ಆತ್ಮಹತ್ಯಾ ಆಟ ಹಬ್ಬುತ್ತಿದೆ.
ಅರ್ಜೆಂಟೀನಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಅದಕ್ಕೆ ಮೋಮೋ ಚಾಲೆಂಜ್ ಕಾರಣ ಎಂದು ಪತ್ರಿಕೆ ಯೊಂದು ವರದಿ ಮಾಡಿದೆ. ಈ ನಡುವೆ, ಮೋಮೋ ಚಾಲೆಂಜ್ ಕುರಿತು ಸ್ಪೇನ್ ನ ರಾಷ್ಟ್ರೀಯ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಏನಿದು ಆಟ?: ಅತ್ಯಂತ ಭಯಾನಕ ಚಿತ್ರವೊಂದು ವಾಟ್ಸ್‌ಆ್ಯಪ್‌ಗೆ ಬರುತ್ತದೆ. ಅದರ ಜತೆಗೆ ಕೆಲವೊಂದು ಸವಾಲುಗಳನ್ನೂ ನೀಡಲಾಗಿರುತ್ತದೆ. ಹದಿಹರೆಯದ ಮಕ್ಕಳಿಗೆ ಸವಾಲಿಗೆ ಅನುಸಾರ ವಿಚಿತ್ರ ನಡವಳಿಕೆ ತೋರಿ ಸುವಂತೆ ನಿರ್ದೇಶನವಿರುತ್ತದೆ. ಕೊನೆಗೆ ಆತ್ಮಹತ್ಯೆಯಲ್ಲಿ ಈ ಆಟ ಪರ್ಯ ವಸಾನಗೊಳ್ಳುತ್ತದೆ ಎಂದು ಹೇಳಲಾಗಿದೆ.
ಮೋಮೋ ಚಾಲೆಂಜ್‌ನಡಿ ವಾಟ್ಸ್‌ಆ್ಯಪ್‌ಗೆ ಬರುವ ವಿಚಿತ್ರ ಫೋಟೋವನ್ನು ಜಪಾನ್ ಕಲಾವಿದ ಮಿಡೋರಿ ಹಯಾಶಿ ಎಂಬುವರು ಸೃಷ್ಟಿಸಿದ್ದಾರೆ. ಆ ಚಿತ್ರಕ್ಕೂ, ಅದನ್ನು ಬರೆದವರಿಗೂ ಮತ್ತು ಈ ಆಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ. ವಾಟ್ಸ್‌ಆ್ಯಪ್ ಮೂಲಕ ಮೋಮೊ ಚಾಲೆಂಜ್ ಬರುತ್ತಿದ್ದು, ಅದನ್ನು ಸ್ವೀಕರಿಸಿದವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಬ್ಲೂವೇಲ್ ಚಾಲೆಂಜ್ ರೀತಿಯಲ್ಲೇ ಈ ಆಟವೂ ಇರುತ್ತದೆ ಎನ್ನಲಾಗಿದೆ.
ಈ ನಡುವೆ ಮೋಮೋ ಚಾಲೆಂಜ್ ಬಗ್ಗೆ ಕೆಲ ಗುಮಾನಿಗಳೂ ಇವೆ. ಮೂಲಕ ಮೋಮೋ ಚಾಲೆಂಜ್ ಒಡ್ಡಿ ಖಾಸಗಿ ಮಾಹಿತಿಗಳನ್ನು ಕದಿಯುವ ಹುನ್ನಾರವೂ ಇದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಇನ್ನು ಕೆಲವರು ಈ ಚಾಲೆಂಜ್ ಕಪಿಮುಷ್ಟಿಗೆ ಸಿಲುಕದಂತೆ ಮಕ್ಕಳನ್ನು ನೋಡಿ ಕೊಳ್ಳುವಂತೆ ಪೋಷಕರಿಗೆ ಸಲಹೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.