ದೇಶದಲ್ಲಿ ವಾಟ್ಸ್‌ಆ್ಯಪ್, ಫೇಸ್ ಬುಕ್ ಗೆ ನಿರ್ಬಂಧ ?

Published : Aug 08, 2018, 11:26 AM IST
ದೇಶದಲ್ಲಿ ವಾಟ್ಸ್‌ಆ್ಯಪ್,  ಫೇಸ್ ಬುಕ್ ಗೆ ನಿರ್ಬಂಧ ?

ಸಾರಾಂಶ

ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬಂದಾಗ ಅದರ ನಿಯಂತ್ರಣದ ಉದ್ದೇಶದಿಂದ ವಾಟ್ಸ್ ಆ್ಯಪ್ ಹಾಗೂ ಫೇಸ್ ಬುಕ್ ನಂತಹ  ಆ್ಯಪ್‌ಗಳಿಗೆ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ  ಗಂಭೀರ ಚಿಂತನೆ ನಡೆಸಿದೆ.

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್, ವಾಟ್ಸ್‌ಆ್ಯಪ್ ಮೇಲೆ ನಿಗಾ ಇಡಲು ಸಾಮಾಜಿಕ ಜಾಲತಾಣ ಹಬ್ ಸ್ಥಾಪಿಸುವ ಪ್ರಸ್ತಾವ ಕೈಬಿಟ್ಟ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬಂದಾಗ ಇಂತಹ ಆ್ಯಪ್‌ಗಳಿಗೆ ನಿರ್ಬಂಧ ವಿಧಿಸಲು ಗಂಭೀರ ಚಿಂತನೆ ನಡೆಸಿದೆ.

ದೂರಸಂಪರ್ಕ ಇಲಾಖೆ ಈ ಸಂಬಂಧ ಟೆಲಿಕಾಂ, ಇಂಟರ್ನೆಟ್ ಸೇವಾದಾತ ಕಂಪನಿಗಳು ಹಾಗೂ ಸೆಲ್ಯು ಲರ್ ಆಪರೇಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾಗೆ ಪತ್ರ ಬರೆದಿದ್ದು, ಅಭಿಪ್ರಾಯ ಕೇಳಿದೆ. ಫೇಸ್‌ಬುಕ್, ಇನ್ಸ್ ಟಾಗ್ರಾಂ, ವಾಟ್ಸ್‌ಆ್ಯಪ್, ಟೆಲಿಗ್ರಾಂನಂತಹ ಆ್ಯಪ್ ಗಳನ್ನು ಕೆಲವೊಂದು ಸಂದರ್ಭಗಳಲ್ಲಿ ನಿರ್ಬಂಧಿಸುವ ಕುರಿತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಕಾನೂನು ಜಾರಿ ಸಂಸ್ಥೆಗಳು ಪ್ರಸ್ತಾಪಿಸಿವೆ. 

ಕಂಪ್ಯೂಟರ್  ಸಂಪನ್ಮೂಲದ ಮೂಲಕ ಮಾಹಿತಿಯನ್ನು ಸಾರ್ವಜನಿಕರು ಬಳಸುವುದಕ್ಕೆ ನಿರ್ಬಂಧ ಹೇರುವ ಸಂಬಂಧ ಸೂಚನೆ ನೀಡುವ ಅಧಿಕಾರ ಈಗಾಗಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿ ಕೇಂದ್ರ ಸರ್ಕಾರಕ್ಕೆ ಲಭ್ಯವಿದೆ. ಆದರೆ ತುರ್ತು ಸಂದ ರ್ಭಗಳಲ್ಲಿ ಆ್ಯಪ್‌ಗಳ ಮೇಲೆ ನಿಗಾ ಇಡುವುದು ಕಷ್ಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ!
ಬೆಂಗಳೂರಲ್ಲಿ ಇಂದು ಇನ್ನಷ್ಟು ಚಳಿ; ತಾಪಮಾನ ಕುಸಿತ, ಈ ಮೂರು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!