ಏರ್‌ಪೋರ್ಟಲ್ಲಿ ಕಾಫಿ, ಟೀಗೆ 180 ರು. ದರ : ಚಿದಂಬರಂ ಸಿಡಿಮಿಡಿ

By Suvarna Web DeskFirst Published Mar 26, 2018, 9:02 AM IST
Highlights

ವಿಮಾನ ನಿಲ್ದಾಣಗಳಲ್ಲಿ ಕಾಫಿ, ಟೀ ಸೇರಿದಂತೆ ಪಾನೀಯಗಳು ಮತ್ತು ತಿಂಡಿ, ಊಟಕ್ಕೆ ಭಾರೀ ದುಬಾರಿ ದರ ವಿಧಿಸಲಾಗುತ್ತದೆ ಎಂಬುದು ಹಿಂದಿನಿಂದಲೂ ಪ್ರಯಾಣಿಕರ ದೂರು. ಈ ದೂರಿಗೀಗ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೂಡಾ ಧ್ವನಿಗೂಡಿಸಿದ್ದಾರೆ.

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಕಾಫಿ, ಟೀ ಸೇರಿದಂತೆ ಪಾನೀಯಗಳು ಮತ್ತು ತಿಂಡಿ, ಊಟಕ್ಕೆ ಭಾರೀ ದುಬಾರಿ ದರ ವಿಧಿಸಲಾಗುತ್ತದೆ ಎಂಬುದು ಹಿಂದಿನಿಂದಲೂ ಪ್ರಯಾಣಿಕರ ದೂರು. ಈ ದೂರಿಗೀಗ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೂಡಾ ಧ್ವನಿಗೂಡಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಚಿದು, ‘ಚೆನ್ನೈ ವಿಮಾನ ನಿಲ್ದಾಣದಲ್ಲಿ ನಾನೊಂದು ಕಪ್‌ ಟೀ ಕೇಳಿದೆ. ಟೀ ಬ್ಯಾಗ್‌ ಮತ್ತು ಬಿಸಿ ನೀರನ್ನಿಟ್ಟು 135 ರು. ಕೇಳಿದರು.

ನಾನದನ್ನು ನಿರಾಕರಿಸಿದೆ. ನಾನು ಮಾಡಿದ್ದು ತಪ್ಪೋ, ಸರಿಯೋ?’ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ,‘ ಕಾಫಿ ಬೆಲೆ 180 ರು. ಅಂತೆ. ಆಗ ಯಾರಿದನ್ನು ಕೊಳ್ಳುತ್ತಾರೆ ಎಂದು ಕೇಳಿದೆ. ‘ಹಲವರು’ ಎಂದರು. ಅಂದರೆ ನಾನು ಹಿಂದುಳಿದವನೇ?’ ಎಂದು ಚಿದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

click me!