
ನವದೆಹಲಿ(ಆ.15): ಸ್ವಾತಂತ್ರ್ಯ ದಿನದ ಅಂಗವಾಗಿ ನೀಡುವ ಪೊಲೀಸ್ ಪದಕಗಳಿಗೆ ಪುರಸ್ಕೃತರಾದವರ ಹೆಸರನ್ನು ಕೇಂದ್ರ ಗೃಹ ಸಚಿವಾಲಯ ಹೆಸರನ್ನು ಪ್ರಕಟಿಸಿದ್ದು, ವಿಶಿಷ್ಟ ಸೇವಾ ಪದಕಕ್ಕೆ ಬೆಂಗಳೂರು ನಗರ ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ನೆಲಮಂಗಲ ಉಪವಿಭಾಗದ ಡಿವೈಎಸ್‌ಪಿ ರಾಜೇಂದ್ರಕುಮಾರ್, ಸಿಐಡಿಯ ಎ.ಎಸ್. ಮುನಿಹನುಮಯ್ಯ ಭಾಜನರಾಗಿದ್ದಾರೆ. ಉಳಿದಂತೆ ರಾಜ್ಯದ 18 ಪೊಲೀಸರನ್ನು ಶ್ಲಾಘನೀಯ ಸೇವಾ ಪದಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ವಿಭಾಗದಲ್ಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ರಾಜ್ಯದ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಹಾಗೂ ನಾಲ್ವರು ಶ್ಲಾಘನೀಯ ಸೇವಾ ಪದಕಕ್ಕೆ ಮತ್ತು ಅಗ್ನಿಶಾಮಕ ದಳ ವಿಭಾಗದಲ್ಲಿನ ಶ್ಲಾಘನೀಯ ಸೇವಾ ಪದಕಕ್ಕೆ ನಾಲ್ವರು ಆಯ್ಕೆ ಆಗಿದ್ದಾರೆ
ವಿವಿಧ ರಾಜ್ಯದ ನಾನಾ ವಿಭಾಗಗಳಲ್ಲಿ ಒಟ್ಟು 990 ಪೊಲೀಸ್ ಪದಕಗಳನ್ನು ಗೃಹ ಸಚಿವಾಲಯವು ಪ್ರಕಟಣೆ ಮಾಡಿದೆ. ಇದರಲ್ಲಿ ಶೌರ್ಯಕ್ಕಾಗಿನ ರಾಷ್ಟ್ರಪತಿ ಪದಕ ಒಂದು, ಶೌರ್ಯಕ್ಕಾಗಿನ ಪೊಲೀಸ್ ಪದಕದ ಗೌರವ 190, ರಾಷ್ಟ್ರಪತಿಗಳ ವಿಶಿಷ್ಟ ಪೊಲೀಸ್ ಸೇವಾ ಪದಕ 93 ಮತ್ತು 706 ಶ್ಲಾಘನೀಯ ಸೇವಾ ಪೊಲೀಸ್ ಪದಕಗಳು ಸೇರಿವೆ.
ವಿಶಿಷ್ಟ ಸೇವಾ ಪದಕ:
ಬೆಂಗಳೂರು ನಗರ ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ರಾಜೇಂದ್ರ ಕುಮಾರ್, ಸಿಐಡಿಯ ಎಎಸ್‌ಐ ಮುನಿ ಹನುಮಯ್ಯ.
ಶ್ಲಾಘನೀಯ ಸೇವಾ ಪದಕ:
ಕೊಡಗಿನ ಎಸ್‌ಪಿ ರಾಜೇಂದ್ರ ಪ್ರಸಾದ್, ಕಲಬುರಗಿ ಕೆಎಸ್‌ಆರ್‌ಪಿ ಕಮಾಂಡೆಂಟ್ ಬಸವರಾಜ, ಬೆಳಗಾವಿ ನಗರದ ಸಂಚಾರ ಎಸಿಪಿ ಶಂಕರ್ ಕೆ ಮಾರಿಹಾಳ್, ಸಿಐಡಿ ಅರಣ್ಯ ಘಟಕದ ಡಿವೈಎಸ್ಪಿ ಎ.ಆರ್.ಬಲರಾಮೇಗೌಡ, ಮುಳಬಾಗಲು ಡಿವೈಎಸ್ಪಿ ಬಿ.ಕೆ.ಉಮೇಶ್, ಮಂಗಳೂರು ಎಸಿಬಿಯ ಡಿವೈಎಸ್ಪಿ ಸುಧೀರ್.ಎಂ.ಹೆಗ್ಡೆ, ಬೆಂಗಳೂರು ಕೆಎಲ್‌ಎಯ ಡಿವೈಎಸ್ಪಿ ಬಸವರಾಜ್ ಆರ್.ಮಗದಮ್, ಶಹಬಾದ್ ಡಿವೈಎಸ್ಪಿ ಎಂ.ಬಿ.ಮೇಘಣ್ಣವರ್, ಹುಬ್ಬಳ್ಳಿಯ ಕಸಬಾಪೇಟ್ ಇನ್ಸ್‌ಪೆಕ್ಟರ್ ಮಾರುತಿ ಶೇಖರಪ್ಪ ಗುಲ್ಲಾರಿ, ಡಿಜಿಪಿ ನಿಯಂತ್ರಣ ಕೊಠಡಿ ಪಿಎಸ್‌ಐ ಗಂಗಾಧರ ಸಾ, ಬೆಂಗಳೂರಿನ ಕೆಎಸ್‌ಆರ್‌ಪಿಯ ಕೆ.ಎ.ಶ್ರೀರಾಮ, ಮೈಸೂರಿನ ಸಹಾಯಕ ಮೀಸಲು ಸಬ್ ಇನ್ಸ್‌ಪೆಕ್ಟರ್ ಎಂ.ಬಾಬು, ಮೈಸೂರಿನ ಸಹಾಯಕ ಮೀಸಲು ಸಬ್ ಇನ್ಸ್‌ಪೆಕ್ಟರ್ ಶರವಣ, ಬೆಂಗಳೂರು ಗುಪ್ತಚರ ವಿಭಾಗದ ಎಚ್‌ಸಿ ಎನ್.ಎಸ್.ಅಯ್ಯಂಗಾರ್ ರಾಜು, ಕೆಎಸ್‌ಆರ್‌ಪಿ ಹೆಡ್ ಕಾನ್ಸ್‌ಟೇಬಲ್ ಬಿ.ನಾರಾಯಣ ರಾವ್, ಕೊಪ್ಪಳದ ಮುನಿರಾಬಾದ್‌ನ ಮೀಸಲು ಹೆಡ್ ಕಾನ್ಸ್‌ಟೇಬಲ್ ಸುರೇಶ್.ಬಿ.ಅಬ್ಬಿಗೇರಿ, ಕಲಬುರಗಿಯ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಕೆ. ಅನಂತರಾವ್, ಧಾರವಾಡದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಎ.ಎ ಮಿರ್ಜಿ, ರೈಲ್ವೇ ವಿಭಾಗದಲ್ಲಿ ಹಾಸನದ ಇನ್ಸ್‌ಪೆಕ್ಟರ್ ಸಂಜಯ್ ರಾಮಚಂದ್ರ ಕರೆಕ್ಕರ್, ಯಲಹಂಕದ ಹೆಡ್ ಕಾನ್ಸ್‌ಟೇಬಲ್ ಎಂ.ಮೋಹನ್.
ಕಾರಾಗೃಹ ಅಧಿಕಾರಿಗೆ ಪುರಸ್ಕಾರ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಜೈಲಿನ ಮುಖ್ಯ ವಾರ್ಡನ್ ಎಂ.ಎಸ್.ಹೊಸೂರು ಅವರಿಗೆ ಶ್ಲಾಘನೀಯ ಸೇವಾ ಪದಕಕ್ಕೆ ನೀಡಿದೆ.
ಅಗ್ನಿ ಶಾಮಕ ಮತ್ತು ಹೋಮ್‌ಗಾರ್ಡ್ಸ್ ಪದಕ ಘೋಷಣೆ
ಅಗ್ನಿಶಾಮಕ ದಳ ವಿಭಾಗದಲ್ಲಿನ ಶ್ಲಾಘನೀಯ ಸೇವಾ ಪದಕಕ್ಕೆ ಕರ್ನಾಟಕದ ನಾಲ್ವರು ಆಯ್ಕೆ ಆಗಿದ್ದಾರೆ. ಜಿಲ್ಲಾ ಆಗ್ನಿ ಶಾಮಕ ಅಧಿಕಾರಿ ರಮೇಶ ಸೋಮಸುಂದರ, ಅಗ್ನಿಶಾಮಕ ಅಧಿಕಾರಿ ವೆಂಕಟರಮಣ ಮೊಗೇರ, ಸಹಾಯಕ ಆಗ್ನಿಶಾಮಕ ಅಧಿಕಾರಿ ವೆಂಕಟಸ್ವಾಮಿ ಮತ್ತು ಲೀಡಿಂಗ್ ಫೈರ್‌ಮನ್ ಎಸ್‌ಎಂ ರೇವಣಸಿದ್ದೇಶ್ವರ ಅವರಿಗೆ ಗೌರವ ಸಂದಿದೆ.
ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ವಿಭಾಗದಲ್ಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ರಾಜ್ಯದ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಮತ್ತು ಶ್ಲಾಘನೀಯ ಸೇವಾ ಪದಕವು ಸೆಕ್ಷನ್ ಲೀಡರ್ ಕೆ.ವಿ.ಮಂಜುನಾಥ್, ಪ್ಲಟೂನ್ ಕಮಾಂಡರ್ ಬಿ.ಕೆ.ಬಸವಲಿಂಗ, ಸೀನಿಯರ್ ಪ್ಲಟೂನ್ ಕಮಾಂಡರ್ ಎಚ್.ಜೆ.ಚಂದ್ರಕಾಂತ, ಸಾರ್ಜೆಂಟ್ ಪಿ.ಟಿ.ಬಸವರಾಜಪ್ಪ ಅವರಿಗೆ ಪದಕ ಲಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.