ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಆಯ್ಕೆ ಮೀರಾ ಕುಮಾರೋ? ಸುಶೀಲ್ ಕುಮಾರ್ ಶಿಂಧೆಯೋ?

By Suvarna Web DeskFirst Published Jun 20, 2017, 4:04 PM IST
Highlights

ರಾಮ್ ನಾಥ್ ಕೋವಿಂದರವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಪ್ರತಿಪಕ್ಷಗಳು ಕೂಡಾ ಇವರಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ತಯಾರಿ ನಡೆಸಿವೆ. ದಲಿತ ಎನ್ನುವ ಅಂಶವನ್ನೇ ಮುಂದಿಟ್ಟುಕೊಂಡು ಕೋವಿಂದರವರನ್ನು ಕಣಕ್ಕಿಳಿಸಿರುವ ಎನ್’ಡಿಎಗೆ ಪೈಪೋಟಿ ನೀಡಲು ಪ್ರತಿಪಕ್ಷಗಳು ಕೂಡಾ ದಲಿತ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲಿದ್ದಾರೆ. ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೆಸರು ಅಂತಿಮವಾಗಿ ಕೇಳಿ ಬರುತ್ತಿದೆ. ಗುರುವಾರ ಹೆಸರು ಅಂತಿಮವಾಗಲಿದೆ.

ನವದೆಹಲಿ (ಜೂ.20): ರಾಮ್ ನಾಥ್ ಕೋವಿಂದರವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಪ್ರತಿಪಕ್ಷಗಳು ಕೂಡಾ ಇವರಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ತಯಾರಿ ನಡೆಸಿವೆ. ದಲಿತ ಎನ್ನುವ ಅಂಶವನ್ನೇ ಮುಂದಿಟ್ಟುಕೊಂಡು ಕೋವಿಂದರವರನ್ನು ಕಣಕ್ಕಿಳಿಸಿರುವ ಎನ್’ಡಿಎಗೆ ಪೈಪೋಟಿ ನೀಡಲು ಪ್ರತಿಪಕ್ಷಗಳು ಕೂಡಾ ದಲಿತ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲಿದ್ದಾರೆ. ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೆಸರು ಕೇಳಿ ಬರುತ್ತಿದೆ. ಗುರುವಾರ ಹೆಸರು ಅಂತಿಮವಾಗಲಿದೆ.

ಇವರಿಬ್ಬರೂ ಕೂಡಾ ದಲಿತ ಮುಖಗಳು. ಮೀರಾ ಕುಮಾರ್ ಬಾಬು ಜಗಜೀವನ್ ರಾಮ್ ಕುಟುಂಬಕ್ಕೆ ಸೇರಿದವರು. ಬಿಹಾರ ಮೂಲದವರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಕಷ್ಟದಲ್ಲಿ ಸಿಲುಕಿದ್ದಾರೆರ. ಇವರನ್ನು ನಿರ್ಲಕ್ಷಿಸುವುದು ಕಷ್ಟವಾಗಿದೆ. ಮಾಯಾವತಿಗೆ ಇನ್ನಷ್ಟು ಸುಲಭವಾಗಿದೆ. ಇನ್ನು ಮೀರಾ ಕುಮಾರ್ ಬಗ್ಗೆ ಅಪಸ್ವರಗಳಿವೆ. 2014 ರಲ್ಲಿ ಸ್ಪೀಕರ್ ಅವಧಿ ಮುಗಿ ಮೇಲೂ ಲ್ಯೂಟೆನ್ಸ್ ಬಂಗಲೆಯಲ್ಲಿ ಕೆಲಕಾಲ ತಂಗಿದ್ದರು ಎನ್ನುವ ಆರೋಪವಿದೆ.  ಜೊತೆಗೆ ಕೆಲವು ಭೂ ವ್ಯವಹಾರಗಳಲ್ಲಿ ಇವರ ಹೆಸರು ಕೇಳಿ ಬಂದಿದೆ.  ಇದೆಲ್ಲದರ ಮಧ್ಯೆಯೂ ನಿತೀಶ್ ಕುಮಾರ್ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವುದು ತಕ್ಕ ಮಟ್ಟಿಗೆ ಕಾಂಗ್ರೆಸ್ ಗೆ ಗೆಲುವಾಗಿ ಪರಿಣಮಿಸಿದೆ.

ಇನ್ನೊಂದು ಕಡೆಯಲ್ಲಿ ಸುಶೀಲ್ ಕುಮಾರ್ ಶಿಂದೆಯನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಮಾಯಾವತಿ ಸೇರಿದಂತೆ ಇನ್ನು ಕೆಲವರ ಮತ ಸಿಗುವುದು ನಿಶ್ಚಿತ.

ಜೂ.22 ರಂದು ಪ್ರತಿಪಕ್ಷಗಳು ಅಂತಿಮ ದಾಳ ಬೀಳಿಸಲಿವೆ. ಇಬ್ಬರು ಪ್ರಬಲ ವ್ಯಕ್ತಿಗಳಾಗಿರುವುದರಿದ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಪ್ರತಿಪಕ್ಷಗಳು ತೊಡಗಿವೆ.

click me!