ದೇಶದಲ್ಲೇ ಮೊದಲ ಪರೋಪಕಾರಿ ಮಸೂದೆಗೆ ಅಂಕಿತ

Published : Oct 01, 2018, 07:25 AM IST
ದೇಶದಲ್ಲೇ ಮೊದಲ ಪರೋಪಕಾರಿ ಮಸೂದೆಗೆ ಅಂಕಿತ

ಸಾರಾಂಶ

ಅಪಘಾತ ಗಾಯಾಳುಗಳಿಗೆ ನೆರವಾಗುವ ವ್ಯಕ್ತಿಗಳಿಗೆ ಕಾನೂನು ರಕ್ಷಣೆ ಹಾಗೂ ಬಹುಮಾನ ನೀಡಲು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರೂಪಿಸಿರುವ ‘ಪರೋಪಕಾ ರಿಗಳ ರಕ್ಷಣೆ ಮಸೂದೆ’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹಿ ಹಾಕಿದ್ದಾರೆ.

ನವದೆಹಲಿ: ಅಪಘಾತ ಗಾಯಾಳುಗಳಿಗೆ ನೆರವಾಗುವ ವ್ಯಕ್ತಿಗಳಿಗೆ ಕಾನೂನು ರಕ್ಷಣೆ ಹಾಗೂ ಬಹುಮಾನ ನೀಡಲು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರೂಪಿಸಿರುವ ‘ಪರೋಪಕಾ ರಿಗಳ ರಕ್ಷಣೆ ಮಸೂದೆ’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹಿ ಹಾಕಿದ್ದಾರೆ.ಅಪಘಾತದಲ್ಲಿ ಗಂಭೀರವಾಗಿ ಗಾಯ ಗೊಂಡ ವ್ಯಕ್ತಿಗಳು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ, ಅವರನ್ನು ಆಸ್ಪತ್ರೆಗೆ ಸೇರಿಸಲು ಜನರು ಹಿಂಜರಿಯುತ್ತಿದ್ದಾರೆ. 

ಸಹಾಯ ಹಸ್ತ ಚಾಚಿದರೆ ಎಲ್ಲಿ ಪೊಲೀಸು, ಕೋರ್ಟು ಎಂದು ಅಲೆಯಬೇಕಾಗುತ್ತದೋ ಎಂಬ ಭಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ನಡುವೆ, ರಸ್ತೆಯಲ್ಲಿ ಜನ ಸಾಯುತ್ತಿದ್ದರೂ ನೆರವಾಗದೇ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುವ ಸಂವೇದನಾರಹಿತ ಮನಸ್ಸುಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲೇ ಅಪಘಾತ ಗಾಯಾಳು ಗಳಿಗೆ ನೆರವಾಗುವವರಿಗೆ ಕಾನೂನಿನ ರಕ್ಷಣೆ ಒದಗಿಸುವ ಸಲುವಾಗಿ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮಸೂದೆ ರೂಪಿಸಿತ್ತು. ಅದು ರಾಷ್ಟ್ರಪತಿಗಳ ಅವಗಾಹನೆಗೆ ರವಾನೆಯಾಗಿತ್ತು.

‘ಕರ್ನಾಟಕ ಉತ್ತಮ ಪರೋಪಕಾರಿ ಹಾಗೂ ವೈದ್ಯ ವೃತ್ತಿಪರ (ತುರ್ತು ಸಂದರ್ಭ ಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆ 2016ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿ ಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮಸೂದೆಯಲ್ಲಿ ಏನಿದೆ ಅಂಶ?: ಅಪಘಾತ ನಡೆದ ಕ್ಷಣದಿಂದ ಒಂದು ತಾಸು ಅವಧಿಯನ್ನು ‘ಗೋಲ್ಡನ್ ಅವರ್’ (ಸುವರ್ಣ ಗಳಿಗೆ) ಎಂದು ಕರೆಯಲಾಗುತ್ತದೆ. 

ಅಷ್ಟರೊಳಗೆ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವವಾದುದು. ಆದರೆ, ಗಾಯಾಳುಗಳಿಗೆ ನೆರವಾದರೆ ಪೊಲೀ ಸರು ಸಾಕ್ಷಿಯಾಗಿ ಪರಿಗಣಿಸುತ್ತಾರೆ, ಎಲ್ಲ ಕೆಲಸ ಬಿಟ್ಟು ನ್ಯಾಯಾಲಯಗಳಿಗೆ ಅಲೆಯಬೇಕಾಗು ತ್ತದೆ ಎಂಬ ಭಾವನೆ ಜನಮಾನಸದಲ್ಲಿದೆ. ಇದನ್ನು ಹೋಗಲಾಡಿಸುವ ಸಲುವಾಗಿ ಕರ್ನಾಟಕ ಮಸೂದೆ ರೂಪಿಸಿತ್ತು.

ಈ ವಿಧೇಯಕದ ಪ್ರಕಾರ, ಸಕಾಲದಲ್ಲಿ ಅಪಘಾತ ಗಾಯಾಳುಗಳಿಗೆ ನೆರವು ನೀಡುವ ವರಿಗೆ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ. ನ್ಯಾಯಾಲಯಗಳು ಹಾಗೂ ಪೊಲೀಸ್ ಠಾಣೆ ಗಳಿಗೆ ಪದೇ ಪದೇ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ. ಕಡ್ಡಾಯವಾಗಿ
ಹಾಜರಾಗಲೇಬೇಕೆಂಬ ಸಂದರ್ಭ ಸೃಷ್ಟಿಯಾ ದರೆ, ಅದರ ವೆಚ್ಚವನ್ನು ಉತ್ತಮ ಪರೋಪಕಾರಿ ನಿಧಿಯಿಂದ ಭರಿಸಲಾಗುತ್ತದೆ. 

ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಪರೋಪಕಾರಿಗಳು ತಕ್ಷಣವೇ ಹೊರಡಬಹುದು. ಎಲ್ಲ ಸರ್ಕಾರಿ  ಹಾಗೂ ಖಾಸಗಿ ಆಸ್ಪತ್ರೆಗಳು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಮಸೂದೆ ಹೇಳುತ್ತದೆ. ಸಹಾಯ ಮಾಡುವ ಮನಸ್ಸುಗಳಿಗೆ ಯಾವುದೇ ಕಿರುಕುಳ ನೀಡುವುದಿಲ್ಲ ಎಂಬುದನ್ನು ಈ ಮಸೂದೆ ಸ್ಪಷ್ಟಪಡಿಸುತ್ತದೆ ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. 2016 ರಲ್ಲಿ ದೇಶದಲ್ಲಿ 4.80 ಲಕ್ಷ ಅಪಘಾತಗಳು ಸಂಭವಿಸಿ 1.50 ಲಕ್ಷ ಜನರು ಮೃತಪಟ್ಟಿದ್ದರು.

2015ರಲ್ಲಿ 5 ಲಕ್ಷ ಅಪಘಾತ ಸಂಭವಿಸಿ 1.46 ಲಕ್ಷ ಜನ ಸಾವನ್ನಪ್ಪಿದ್ದರು. ಈ ಎರಡೂ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ ಟಾಪ್ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 

ಏನಿದು ಕಾಯಿದೆ? : 2016 ರಲ್ಲಿ ಬೆಂಗಳೂರಿನ ನೆಲಮಂಗಲ ಬಳಿ ಹರೀಶ್ ಎಂಬ ಯುವಕ ಅಪಘಾತ ಕ್ಕೀಡಾಗಿ ಆತನ ದೇಹ ಅರ್ಧ ಡಾಗಿತ್ತು. ರಸ್ತೆ ನಡುವೆ ಬಿದ್ದಿದ್ದ ಅರ್ಧ ದೇಹದಲ್ಲೇ ಆತ ರಕ್ಷಣೆಗಾಗಿ ಜನರನ್ನು ಯಾಚಿಸುತ್ತ ಮುಂದಕ್ಕೆ ತೆವಳುತ್ತಿದ್ದ. ಆದರೆ, ಜನರು ಆತನ ನರಳಾಟವನ್ನು ವಿಡಿಯೋ ಮಾಡಿ ಕೊಳ್ಳುತ್ತಿದ್ದರೇ ಹೊರತು ಯಾರೂ ನೆರವಿಗೆ ಧಾವಿಸಿರಲಿಲ್ಲ. 

ಈ ಪ್ರಕರಣದ ನಂತರವೂ ಇಂತಹುದೇ ಕೆಲ ಪ್ರಕರಣಗಳು ಘಟಿಸಿದ್ದವು. ಈ ಹಿನ್ನೆಲೆಯಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ಕೊಡಿಸುವವರಿಗೆ ಪ್ರೋತ್ಸಾಹ ನೀಡಲು ‘ಮುಖ್ಯಮಂತ್ರಿಗಳ ಹರೀಶ್ ಸಾಂತ್ವನ ಯೋಜನೆ’ ಎಂಬ ಮಸೂದೆ ಸಿದ್ಧಪಡಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ?
ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ