ನಿಲ್ಲದ ಬೆಲೆ ಏರಿಕೆ ಪರ್ವ: ಪೆಟ್ರೋಲ್​-ಡೀಸೆಲ್​ ಆಯ್ತು, ಈಗ ಗ್ಯಾಸ್​ ಬೆಲೆ ಏರಿಕೆ!

By Web DeskFirst Published Sep 30, 2018, 10:17 PM IST
Highlights

ನಿಲ್ಲದ ಬೆಲೆ ಏರಿಕೆ ಪರ್ವ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯ ಶಾಕ್ ಬೆನ್ನಲ್ಲೇ ಇದೀಗ ಎಲ್ ಪಿಜಿ ಗ್ರಾಹಕರಿಗೆ ಶಾಕಿಂಗ್ ಸುದ್ದಿ. 

ನವದೆಹಲಿ, [ಸೆ.30]: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಇದೀಗ ಗ್ಯಾಸ್ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಆಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಬ್ಸಿಡಿ ಹೊಂದಿದ ಸಿಲಿಂಡರ್ ಬೆಲೆ 2.89 ರೂಪಾಯಿ ಏರಿಕೆಯಾಗಿ ರೂ.502.4 (ದೆಹಲಿಯ ಬೆಲೆ) ಆಗಿದ್ದರೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ  59.00 ರು.ಗೆ ಏರಿಕೆಯಾಗಿದೆ. 

ಅಂತಾರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ಏರಿಳಿತದ ಬದಲಾವಣೆಯಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಬೆಲೆಯನ್ನು ಇದೇ ಅಕ್ಟೋಬರ್ ನಲ್ಲಿ ಪ್ರತಿ ಸಿಲಿಂಡರ್ ಗೆ 59.ರು. ಹೆಚ್ಚಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹೇಳಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ದೇಶದ ಜನ ಈಗ ದಿನ ನಿತ್ಯದ ಅತ್ಯವಶ್ಯಕತೆ ಇರೋ ಗ್ಯಾಸ್ ಸಿಲೆಂಡರ್‌ ಬೆಲೆ ಏರಿಕೆ ಆಗಿರುವುದನ್ನು ಹೇಗೆ ಸ್ವೀಕರಿಸುತ್ತಾರೊ ನೋಡಬೇಕಿದೆ.

click me!