ಸಂಪಿಗೆ ರಸ್ತೆ-ಯಲಚೇನಹಳ್ಳಿ ಮೊದಲ ಹಂತದ ಮೆಟ್ರೋಗೆ ರಾಷ್ಟ್ರಪತಿಯಿಂದ ಹಸಿರು ನಿಶಾನೆ

Published : Jun 17, 2017, 06:36 PM ISTUpdated : Apr 11, 2018, 12:36 PM IST
ಸಂಪಿಗೆ ರಸ್ತೆ-ಯಲಚೇನಹಳ್ಳಿ ಮೊದಲ ಹಂತದ ಮೆಟ್ರೋಗೆ ರಾಷ್ಟ್ರಪತಿಯಿಂದ ಹಸಿರು ನಿಶಾನೆ

ಸಾರಾಂಶ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜ್ಯೋತಿ ಬೆಳಗುವ ಮೂಲಕ ಮೊದಲ ಹಂತದ ಮೆಟ್ರೋವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಮಾರ್ಗಕ್ಕೆ ಹಸಿರು ಹಸಿರು ನಿಶಾನೆ ತೋರಿಸಿದ್ದಾರೆ. 

ಬೆಂಗಳೂರು (ಜೂ.17): ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜ್ಯೋತಿ ಬೆಳಗುವ ಮೂಲಕ ಮೊದಲ ಹಂತದ ಮೆಟ್ರೋವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. 

ಈ ಸಂದರ್ಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತಕುಮಾರ್, ಡಿ.ವಿ. ಸದಾನಂದಗೌಡ, ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಬಿಬಿಎಂಪಿ ಮೇಯರ್ ಪದ್ಮಾವತಿ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಸಂಸದ ಪಿ.ಸಿ. ಮೋಹನ್, ಭಾರತಕ್ಕೆ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು ಉಪಸ್ಥಿತರಿದ್ದರು.

ನಾಳೆ ಸಂಜೆ 4 ಗಂಟೆಯಿಂದ ಮೆಟ್ರೋ ಸೇವೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ನಾಡಿದ್ದಿನಿಂದ ಎಂದಿನಂತೆ ಬೆಳಿಗ್ಗೆ 5.30 ಯಿಂದ ರಾತ್ರಿ 11 ಗಂಟೆವರೆಗೆ ಮೆಟ್ರೋ ಸೇವೆ ಪ್ರಯಾಣಿಕರಿಗೆ ಲಭ್ಯವಿರುತ್ತದೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ನಡುವೆ 12 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ. ಕೇವಲ 25 ನಿಮಿಷದಲ್ಲಿ  ಯಲಚೇನಹಳ್ಳಿ ತಲುಪಲಿದೆ ನಮ್ಮ ಮೆಟ್ರೋ. ಪ್ರಯಾಣಿಕರ ಅನುಕೂಲಕ್ಕಾಗಿ 4 ನಿಮಿಷಕ್ಕೊಂದು ಮೆಟ್ರೋ ಸಂಚಾರವಿರುತ್ತದೆ.  ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ, ಯಲಚೇನಹಳ್ಳಿಯಿಂದ ಏಕಕಾಲಕ್ಕೆ ಮೆಟ್ರೋ ಸಂಚಾರ  ವ್ಯವಸ್ಥೆಯಿರುತ್ತದೆ.

ಕೆಂಪೇಗೌಡ ನಿಲ್ದಾಣದಲ್ಲಿ ಇಂಟರ್​ಚೇಂಜ್​​ ವ್ಯವಸ್ಥೆ  ಕಲ್ಪಿಸಲಾಗಿದೆ.  ಇಲ್ಲಿಗೆ ಬಂದರೆ 4 ದಿಕ್ಕುಗಳಲ್ಲಿ ಎಲ್ಲಿ ಬೇಕಾದ್ರೂ ಸಂಚರಿಸಬಹುದು . ಬೈಯಪ್ಪನಹಳ್ಳಿ, ನಾಯಂಡಹಳ್ಳಿಯಿಂದ ನಾಗಸಂದ್ರ, ಯಲಚೇನಹಳ್ಳಿ ಕಡೆಗೆ ಒಂದೇ ಬಾರಿಗೆ ಟೋಕನ್‌ ಪಡೆಯುವ ವ್ಯವಸ್ಥೆ ಮಾಡಲಾಗಿದೆ.  ಮೆಜೆಸ್ಟಿಕ್‌ ಇಂಟರ್‌ ಚೇಂಜ್‌ ನಿಲ್ದಾಣದಲ್ಲಿ ಮತ್ತೆ ಟೋಕನ್‌ ಪಡೆಯಬೇಕಿಲ್ಲ. ಇನ್ಮುಂದೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಿಗಲಿದೆ ಕೊಂಚ ರಿಲೀಫ್!

ಏನೇನು ಬದಲಾವಣೆಗಳು?

ಟಿಕೆಟ್​ ದರ ಶೇ. 10ರಿಂದ 15ಕ್ಕೆ ಏರಿಕೆ

ನೇರಳೆ ಮತ್ತು ಹಸಿರು ಮಾರ್ಗದ ದರಪಟ್ಟಿ ಹಾಗೂ ರೈಲಿನ ವೇಳಾ ಪಟ್ಟಿ ಬದಲಾವಣೆ

ಚಿಲ್ಲರೆ ಸಮಸ್ಯೆ ಎದುರಾಗದಂತೆ ಟಿಕೆಟ್​ ದರ ಪೂರ್ಣ ಹೆಚ್ಚಳ

ನಾಯಂಡಹಳ್ಳಿ - ಬೈಯಪ್ಪನಹಳ್ಳಿ ನಡುವಿನ 18 ಕಿ.ಮೀಗೆ 40 ರೂ. ಟಿಕೆಟ್​ ದರ

ನಾಗಸಂದ್ರದಿಂದ  ಸಂಪಿಗೆ ರಸ್ತೆ ನಡುವೆ 32 ರೂ. ಟಿಕೆಟ್​ ದರ

ಮೆಟ್ರೋ ವಿಶೇಷತೆಗಳು

ನಮ್ಮ ಮೆಟ್ರೋದ ಪ್ರಮುಖ ಆಕರ್ಷಣೆ ಮೆಜೆಸ್ಟಿಕ್‌‌ನ ಇಂಟರ್ ಚೇಂಜ್ ನಿಲ್ದಾಣ

20 ಸಾವಿರ ಪ್ರಯಾಣಿಕರನ್ನು ಒಂದೇ ಸಮಯದಲ್ಲಿ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ

KSRTC ಬಸ್ ನಿಲ್ದಾಣದ ಕೆಳಭಾಗ ಸುರಂಗ ನಿರ್ಮಿಸಿ ಇಡೀ ನಿಲ್ದಾಣ ನಿರ್ಮಾಣ

6 ಫುಟ್‌ಬಾಲ್‌ ಕ್ರೀಡಾಂಗಣದಷ್ಟು ದೊಡ್ಡ ಜಾಗದಲ್ಲಿ ನಿರ್ಮಾಣ

3 ಹಂತದಲ್ಲಿ 7 ಪ್ರವೇಶ ದ್ವಾರಗಳನ್ನು ಒಳಗೊಂಡ ರೈಲು ನಿಲ್ದಾಣ

KSRTC ಬಸ್ ನಿಲ್ದಾಣ ಮಟ್ಟದಿಂದ ಒಂದು ಹಂತ ಕೆಳಗಿಳಿದ್ರೆ ಟಿಕೆಟ್ ಕೌಂಟರ್‌‌

ಒಂದೇ ಟಿಕೆಟ್ ಕೌಂಟರ್‌ನಲ್ಲಿ ಎಲ್ಲಾ ಕಡೆ ಸಂಚರಿಸಲು ಟಿಕೆಟ್ ಪಡೆಯಬಹುದಾಗಿದೆ

ಒಂದು ಹಂತ ಕೆಳಗಿಳಿದ್ರೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದ ರೈಲು ನಿಲ್ದಾಣ

ನೇರಳೆ ಬಣ್ಣ ನಾಮಫಲಕಗಳನ್ನು ಹಾಕಿ ಪ್ರಯಾಣಿಕರಿಗೆ ಮಾಹಿತಿ

ಇನ್ನೂ ಒಂದು ಹಂತ ಕೆಳಗಿಳಿದರೆ ಸಿಗುತ್ತೆ ಹಸಿರು ಮಾರ್ಗದ ರೈಲು ನಿಲ್ದಾಣ

ನಾಗಸಂದ್ರದಿಂದ ಯಲಚೇನಹಳ್ಳಿ ಮಾರ್ಗದ ರೈಲು ಸಂಚಾರ

ವಿಮಾನ ನಿಲ್ದಾಣದ ರೀತಿಯಲ್ಲಿ ಅತ್ಯಾಧುನಿಕ ಶೈಲಿಯ ಮೆಟ್ರೋ ನಿಲ್ದಾಣ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ

ಹಸಿರು-ನೇರಳೆ ಮಾರ್ಗದ ಈ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಬದಲಿಸಿಸಬಹುದು

ರೈಲು ಬದಲಿಸಿಕೊಳ್ಳಲು ಮತ್ತೊಮ್ಮೆ ಟೋಕನ್‌ ಪಡೆಯುವ ಅಗತ್ಯವಿಲ್ಲ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ