
ಬೆಂಗಳೂರು (ಜೂ.17): ಆ ದಂಪತಿ ತಿರುಪತಿ ತಿಮ್ಮಪ್ಪನಿಗೆ ಗಂಡು ಮಗುವಾಗಲಿ ಅಂತ ಹಲವು ವರ್ಷಗಳಿಂದ ಹರೆಕೆ ಮಾಡ್ಕೊಂಡಿದ್ರು. ತಿಮ್ಮಪ್ಪನ ಹರಕೆ ಫಲಿಸಿ ಆ ದಂಪತಿಗೆ 9 ತಿಂಗಳ ಹಿಂದೆಯಷ್ಟೆ ಗಂಡು ಮಗುವೊಂದು ಜನಿಸಿತ್ತು. ಹೆತ್ತವರೊಂದಿಗೆ ತಿಮ್ಮಪ್ಪನ ಹರಕೆ ತೀರಿಸಲು ಬಂದಿದ್ದ 9 ತಿಂಗಳ ಕಂದಮ್ಮನನ್ನ ಖರ್ತಾನಾಕ್ ಜೋಡಿಯೊಂದು ಕಿಡ್ನಾಪ್ ಮಾಡಿದೆ. ತಿಮ್ಮಪ್ಪನ ಸನ್ನಿದಿಯಲ್ಲಿ ನಡೆದ ಆ ಘಟನೆ ಹೆತ್ತವರ ಒಡಲು ಮುರಿದಿದೆ..!
ತಿಮ್ಮಪ್ಪನಿಗೆ ಹರಕೆ ತೀರಿಸಲು ಕುಟುಂಬವೊಂದು, ಕಳೆದ 13 ರಂದು, ತಿರುಪತಿಗೆ ಆಗಮಿಸಿರುತ್ತಾರೆ. ತಡರಾತ್ರಿ ಆದ ಕಾರಣ, ದೇವಸ್ಥಾನದ ಆವರಣದ ಮುಂದೆ ದಂಪತಿ ತನ್ನ 9 ತಿಂಗಳ ಮಗನೊಂದಿಗೆ ಮಲಗಿರುತ್ತಾರೆ. ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ, ದಂಪತಿ ಮಲಗಿದ್ದ ಪಕ್ಕದಲ್ಲೇ ಇದ್ದ ಮತ್ತೊಂದು ಜೋಡಿ, ಆ ಮಗುವನ್ನ ಕಿಡ್ನ್ಯಾಪ್ ಮಾಡಿ ಪರಾರಿಯಾಗ್ತಾರೆ.
ಈ ಮಗುವನ್ನು ಅವ್ರು ಬೆಂಗಳೂರು ಕಡೆಗೆ ಕರೆದೊಯ್ದಿದ್ದಾಗಿ ಅಲ್ಲಿನ ಕಂಡಕ್ಟರ್ ಒಬ್ಬರು ತಿಳಿಸಿದರು. ಇದರ ಜಾಡು ಹಿಡಿದ ತಿರುಮಲ ಪೊಲೀಸರು ಸಿಲಿಕಾನ್ ಸಿಟಿಯಲ್ಲೆ ಮೊಕ್ಕಂ ಹೂಡಿದ್ದಾರೆ..
ಮಗುವನ್ನ ಅಪಹರಿಸಿದ ಜೋಡಿ, ತಮಿಳು ಮತ್ತು ತೆಲುಗು ಮಾತನಾಡುವರಾಗಿದ್ದು, ಲಿಂಗರಾಜುಪುರ ಹಾಗೂ ಬಾಣಸವಾಡಿ ಏರಿಯಾಗಳಲ್ಲಿ ವಾಸವಿದ್ದಾರೆ ಅನ್ನೋ ಮಾಹಿತಿ ಆಂಧ್ರ ಪೊಲೀಸರಿಗೆ ಸಿಕ್ಕಿದೆ. ಆ ಮಗುವನ್ನ ಹುಡುಕಲು ಪೊಲೀಸರು ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರ ಶ್ರಮ ಮತ್ತು ಆ ದಂಪತಿ ಕಣ್ಣೀರು ನೀಗಬೇಕಾದರೆ ಆ ಮಗು ಸಿಗಲಿ ಅನ್ನೋದೇ ಎಲ್ಲರ ಆಶಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.