ಗರ್ಭಪಾತದ ವೇಳೆ ಪ್ರೇಯಸಿ ಸಾವು : ಪ್ರಿಯಕರನಿಂದ ಇದೆಂಥ ಹೇಯ ಕೃತ್ಯ

Published : Nov 06, 2018, 11:05 AM IST
ಗರ್ಭಪಾತದ ವೇಳೆ ಪ್ರೇಯಸಿ ಸಾವು : ಪ್ರಿಯಕರನಿಂದ ಇದೆಂಥ ಹೇಯ ಕೃತ್ಯ

ಸಾರಾಂಶ

ಮದುವೆಗೂ ಮುನ್ನ ಪ್ರೇಯಸಿ ಗರ್ಭಿಣಿಯಾದಳು. ಇದರಿಂದ ಆಕೆಯನ್ನು ಗರ್ಭಪಾತಕ್ಕೆ ಕರೆದೊಯ್ದ ಪ್ರಿಯಕರ ಈ ವೇಳೆ ಮೃತಳಾದ ಪ್ರೇಯಸಿಯ ದೇಹವನ್ನು ಕಾಡಿನಲ್ಲಿ ಎಸೆದು ಹೋಗಿ ಅಮಾನವೀಯತೆ ಮೆರೆದಿದ್ದಾನೆ. 

ಲಕ್ನೋ : ಗರ್ಭಪಾತದ ವೇಳೆ ಸಾವಿಗೀಡಾದ ಪ್ರೇಯಸಿಯ ದೇಹವನ್ನು ಕಾಡಿನಲ್ಲಿ ಪ್ರಿಯಕರ ಎಸೆದು ಹೋದ ಅಮಾನವೀಯ ಘಟನೆಯೊಂದು  ಉತ್ತರ ಪ್ರದೇಶದಲ್ಲಿ ನಡೆದಿದೆ.

ಸೆಪ್ಟೆಂಬರ್ ತಿಂಗಳ 18ನೇ ತಾರೀಕು ಯುವತಿಯ ಮೃತದೇಹದಲ್ಲಿ ಕಾಡಿನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪ್ರಿಯಕರನ ಕೃತ್ಯ ಬೆಳಕಿಗೆ ಬಂದಿದೆ.  ಇದಾದ ಬಳಿಕ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. 

ಗರ್ಭಪಾತ ಮಾಡಿಸುವ ವೇಳೆ ಆಕೆ ಮೃತಪಟ್ಟಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಪ್ರಿಯಕರ ಒಪ್ಪಿಕೊಂಡಿದ್ದಾಗಿ ಎಸ್ ಎಸ್ ಪಿ ಸುಧೀರ್ ಕುಮಾರ್ ಹೆಳಿದ್ದಾರೆ. ಈ ಸಂಬಂಧ ಇದೀಗ ಐಪಿಸಿ ಸೆಕ್ಷನ್ 304 ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ