
ಮುಂಬೈ: ಗುಜರಾತ್‌ನ ವಜ್ರೋದ್ಯಮಿಯೊಬ್ಬರು ಪ್ರತಿ ವರ್ಷ ಉತ್ತಮ ಸೇವೆಗೈದ ಸಿಬ್ಬಂದಿಗೆ ಕಾರು, ಮನೆ ನೀಡಿ ಸುದ್ದಿಯಾಗುತ್ತಿದ್ದರೆ, ಮುಂಬೈ ಮೂಲದ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಕ್ಯಾಪಿಟಲ್ ಫಸ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ವಿ.ವೈದ್ಯನಾಥನ್, ಕಂಪನಿಯಲ್ಲಿ ತಾವು ಹೊಂದಿದ್ದ ಷೇರುಗಳ ಪೈಕಿ ಶೇ.11ರಷ್ಟನ್ನು ತಮ್ಮ ಕುಟುಂಬ, ಬಂಧುಗಳು, ಕಂಪನಿ ಹಾಲಿ, ಮಾಜಿ ಸಿಬ್ಬಂದಿ, ಕಾರು ಚಾಲಕ ಮತ್ತು ಮನೆ ಕೆಲಸದವರಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.
ಕ್ಯಾಪಿಟಲ್ ಫಸ್ಟ್ ಶೀಘ್ರವೇ, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನವಾಗುತ್ತಿದ್ದು, ಅದಕ್ಕೂ ಮುನ್ನ ಕಂಪನಿಯನ್ನು ಈ ಮಟ್ಟಿಗೆ ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿದರಿಗೆ ಸಣ್ಣ ಉಡುಗೊರೆ ನೀಡುತ್ತಿರುವುದಾಗಿ ವೈದ್ಯನಾಥನ್ ಹೇಳಿದ್ದಾರೆ. ಕಂಪನಿಯಲ್ಲಿ ವೈದ್ಯನಾಥನ್ 40 ಲಕ್ಷ ಷೇರುಗಳನ್ನು ಹೊಂದಿದ್ದು, ಅದರ ಪೈಕಿ 4.29 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಷೇರುಪೇಟೆಯಲ್ಲಿ ಕ್ಯಾಪಿಟಲ್ ಫಸ್ಟ್ 478 ರು. ಮೌಲ್ಯ ಹೊಂದಿದ್ದು, ಅದರನ್ವಯ ವೈದ್ಯನಾಥನ್ ಉಡುಗೊರೆಯಾಗಿ ನೀಡುತ್ತಿರುವ ಷೇರುಗಳ ಮೌಲ್ಯ 20 ಕೋಟಿ ರು. ಆಗಲಿದೆ.
ಯಾರಿಗೆ ದಾನ: ಕಂಪನಿಯ 23 ಹಾಲಿ ಸಿಬ್ಬಂದಿ, 3 ಮಾಜಿ ಸಿಬ್ಬಂದಿ, ವೈದ್ಯನಾಥನ್ ಅವರ ಇಬ್ಬರು ಸೋದರರು ಮತ್ತು ಸೋದರಿ, ಹೆಣ್ಣು ಕೊಟ್ಟಮಾವ, ಪತ್ನಿ ಸೋದರ ಮಾವ, ಪತ್ನಿಯ ಮೂವರು ಸೋದರರು, ಇಬ್ಬರು ಕಾರು ಚಾಲಕರು ಮತ್ತು ಮೂವರು ಮನೆ ಕೆಲಸದ ಸಿಬ್ಬಂದಿಗೆ ಬೇರೆ ಬೇರೆ ಪ್ರಮಾಣದ ಷೇರು ಹಂಚಿಕೆಯಾಗಲಿದೆ.
ಬ್ರೋಕರೇಜ್ ಕಂಪನಿಯೊಂದು ನಡೆಸುತ್ತಿದ್ದ ಫä್ಯಚರ್ ಕ್ಯಾಪಿಟಲ್ ಕಂಪನಿಯ ಶೇ.10ರಷ್ಟುಷೇರುಗಳನ್ನು 2008ರಲ್ಲಿ ವೈದ್ಯನಾಥನ್ ಖರೀದಿಸಿದ್ದರು. ಆಗ ಕಂಪನಿ 29 ಕೋಟಿ ರು. ನಷ್ಟದಲ್ಲಿತ್ತು. 2018ರಲ್ಲಿ ಕಂಪನಿ 327 ಕೋಟಿ ರು. ಲಾಭದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ