ಗಡಿದಾಟಿ ಬೇರೆ ದೇಶಕ್ಕೆ ಹೋದ ಹಸುವಿಗೆ ಗಲ್ಲು!

First Published Jun 5, 2018, 9:39 AM IST
Highlights

ಅಕ್ರಮವಾಗಿ ಗಡಿ ದಾಟಿ ಇನ್ನೊಂದು ದೇಶದ ಒಳ ಪ್ರವೇಶಿಸಿದರೆ ಶಿಕ್ಷೆ ಕಾದಿಟ್ಟಬುತ್ತಿ. ಆದರೆ, ಗಡಿದಾಟಿ ಬೇರೆ ದೇಶದಲ್ಲಿ ಅಲೆದಾಡಿದ ತಪ್ಪಿಗೆ ಯುರೋಪಿನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 

(ಸಾಂದರ್ಬಿಕ ಚಿತ್ರ)

ಅಕ್ರಮವಾಗಿ ಗಡಿ ದಾಟಿ ಇನ್ನೊಂದು ದೇಶದ ಒಳ ಪ್ರವೇಶಿಸಿದರೆ ಶಿಕ್ಷೆ ಕಾದಿಟ್ಟಬುತ್ತಿ. ಆದರೆ, ಗಡಿದಾಟಿ ಬೇರೆ ದೇಶದಲ್ಲಿ ಅಲೆದಾಡಿದ ತಪ್ಪಿಗೆ ಯುರೋಪಿನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಗರ್ಭಿಣಿ ಹಸುವೊಂದು ಬಲ್ಗೇರಿಯನ್‌ ಗ್ರಾಮದ ಸಮೀಪ ಹುಲ್ಲು ಮೇಯುತ್ತಿದ್ದಾಗ ಹಿಂಡಿನಿಂದ ತಪ್ಪಿಸಿಕೊಂಡು ಗಡಿದಾಟಿ ಸೈಬೀರಿಯಾಕ್ಕೆ ಹೋಗಿತ್ತು.

ಆ ಹಸು ಇನ್ನು ಮೂರು ವಾರದಲ್ಲಿ ಮುದ್ದಾದ ಕರುವೊಂದಕ್ಕೆ ಜನ್ಮ ನೀಡುವುದರಲ್ಲಿತ್ತು. ಆದರೆ, ಅಧಿಕಾರಿಗಳು ಕೇಳಬೇಕಲ್ಲ. ಯುರೋಪಿನ ನಿಯಮದಂತೆ ಗಡಿದಾಟಿ ಅನ್ಯದೇಶಕ್ಕೆ ಹೋದ ತಪ್ಪಿಗೆ ಹಸುವಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ. ಅಲ್ಲಿನ ನಿಯಮದ ಪ್ರಕಾರ, ಹಸುಗಳನ್ನು ಬೇರೆ ದೇಶಕ್ಕೆ ಸಾಗಿಸಬೇಕಾದರೆ ಗಡಿ ಚೆಕಪೋಸ್ಟ್‌ನಲ್ಲಿ ಹಾಜರುಪಡಿಸಿ, ಆರೋಗ್ಯವಾಗಿರುವ ಬಗ್ಗೆ ದಾಖಲೆಗಳನ್ನು ನೀಡಬೇಕು.

click me!