ವರ್ಕೌಟ್ ಮಾಡುವ ಮುನ್ನ ಯಾವ ಆಹಾರ ಸೇವಿಸಿದರೆ ಉತ್ತಮ..?

By Suvarna Web DeskFirst Published Jan 13, 2018, 4:05 PM IST
Highlights

ನೀವು ವರ್ಕೌಟ್ ಮಾಡುವ ಮುನ್ನ ಯಾವ ಆಹಾರವನ್ನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ಕೆಲವು ಪ್ರಿ ವರ್ಕೌಟ್ ಆಹಾರಗಳು ದೇಹ ತೂಕ ಕಡಿಮೆ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಜಿಮ್ ಹಾಗೂ ಜಾಗಿಂಗ್ ಹೋಗುವ ಮೊದಲು ತಿನ್ನಬೇಕಾದ ಆಹಾರದ ವಿವರ ಇಲ್ಲಿದೆ.

*ಪೀನಟ್ ಡೇಟ್ ಸ್ಯಾಂಡ್ವಿಚ್ : ನೆಲಗಡಲೆಯ ಬೆಣ್ಣೆ ಮತ್ತು ಖರ್ಜೂರದ ಸ್ಟಫ್ಫಿಂಗ್ ಇರುವ  ಸ್ಯಾಂಡ್ವಿಚ್ ತಿನ್ನಬಹುದು.

*ಮಸಾಲ ಆಮ್ಲೆಟ್ ಕೂಡ ತಿನ್ನಬಹುದು, ಇದಕ್ಕೆ ಕ್ಯಾಪ್ಸಿಕಂ, ಆಲೂಗಡ್ಡೆ ಇದ್ದರೂ ಉತ್ತಮ.

*ಟೋಪು – ಬೆರ್ರಿ ಸ್ಮೂದಿ : ಸ್ಟ್ರಾಬೆರ್ರಿ, ಟೋಪು, ಬಾದಾಮು ಹಾಲು ದ್ರಾಕ್ಷಿ ರಸ, ಪೀನಟ್ ಬಟರ್, ಬಾಳೆಹಣ್ಣು ಹಾಕಿ ಮಾಡುವ ಪೇಯ ಉತ್ತಮ ಶಕ್ತಿ ನೀಡುತ್ತದೆ.

*ಮಸಾಲ ಆಮ್ಲೆಟ್ : ಮಶ್ರೂಮ್, ಕ್ಯಾಪ್ಸಿಕಂ, ಚೀಸ್ ಬೇಯಿಸಿದ ಆಲೂ ಟಾಪಿಂಗ್ಸ್ ಇದ್ದರೆ ಉತ್ತಮ.

*ರಸ್ಬರ್ರಿ ಓಟ್ ಮೀಲ್ ಸ್ಮೂದಿ : ವ್ಯಾಯಾಮ ಮಾಡುವ ಮೊದಲು ರಚಿಯಾದ ರಸ್ಬೆರಿ ಓಟ್’ಮೀಲ್ ಬಾರ್ ತಿಂದರೂ ಒಳ್ಳೆಯದು.

*ಮೆಕ್ಸಿಕನ್ ಬೇಕ್’ಡ್ ಎಗ್ : ವ್ಯಾಯಾಮ ಮಾಡುವ ಮೊದಲು ಅರೆ ಬೇಯಿಸಿದ ಮೊಟ್ಟೆ ಸೇವಿಸಿದರೂ ಉತ್ತಮ.

*ತರಕಾರಿ ಜ್ಯೂಸ್: ತಾಜಾ ತರಕಾರಿ ಸೇವೆನೆಯೂ ಕೂಡ ತ್ತಮವಾಗಿದೆ. ಸಲಾಡ್ ರೂಪದಲ್ಲಿಯೂ ಸೇವಿಸಬಹುದು.

click me!