ಕಟ್ಟಿದ ಮೂಗು, ಮೊಡವೆಗೂ ಮದ್ದು ಕಾಳು ಮೆಣಸು

By Suvarna Web DeskFirst Published Jan 13, 2018, 3:20 PM IST
Highlights

ಕಾಳು ಮೆಣಸು ಬಹುವಾರ್ಷಿಕವಾದ ಬಳ್ಳಿಯಾಗಿದೆ. ಪಚ್ಚೆ ಹಸಿರು ಬಣ್ಣದ ಎಲೆಗಳಿರುವ ಬಳ್ಳಿ. ಇದನ್ನು ವಾಣಿಜ್ಯ ಬೆಳೆಯನ್ನಾಗಿ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದು ದಿನನಿತ್ಯ ಬಳಕೆಯಾಗುವ  ಸಂಬಾರ ಪದಾರ್ಥವೂ ಕೂಡ ಆಗಿದೆ. ಇದರ ಒಣ ಬೀಜವನ್ನು ಉಪಯೋಗಿಸಲಾಗುತ್ತದೆ.  ಕಾಂಡದ ತುಂಡನ್ನು ನೆಟ್ಟು ಈ ಬಳ್ಳಿಯನ್ನು ಬೆಳೆಸಲಾಗುತ್ತದೆ.

ಕಾಳುಮೆಣಸಿನ ಉಪಯೋಗ

*ಕೆಮ್ಮು – ದಮ್ಮು, ನೆಗಡಿ, ಸೀನು ಇದ್ದಲ್ಲಿ ಇದರ ಚೂರ್ಣವನ್ನು ಕಲ್ಲುಸಕ್ಕರೆ, ಜೇನುತುಪ್ಪದೊಂದಿದೆ ಅರ್ಧ ಚಮಚ ದಿನಕ್ಕೆ ಎರಡು ಬಾರಿ ಸೇವಿಸಬೇಕು.

*ಜೀರ್ಣಶಕ್ತಿ ಹಾಗೂ ಹಸಿವು ಹೆಚ್ಚಿಸಲು ಇದರ ಚೂರ್ಣವನ್ನು ಮಜ್ಜಿಗೆಯೊಂದಿಗೆ ಬಳಸಬೇಕು.

*ಚೂರ್ಣವನ್ನು ಹಣೆಗೆ ಲೇಪಿಸುವುದರಿಂದ ನೆಗಡಿ ಸಂಬಂಧಿತ ತಲೆನೋವು ಶಮನವಾಗುತ್ತದೆ.

*ಇದರ ಚೂರ್ಣವನ್ನು ನಸ್ಯರೂಪದಲ್ಲಿ ಪ್ರಯೋಗಿಸುವುದರಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ.

*ಇದರ ತೈಲವು ದದ್ರು ಮುಂತಾದ ಚರ್ಮರೋಗಕ್ಕೆ ಹಚ್ಚಲು ಬಳಸಲಾಗುತ್ತದೆ

*ಆರ್ಧ ಚಮಕ ಕಾಳುಮೆಣಸಿನ ಪುಡಿಯನ್ನು ವಿಳ್ಯದೆಲೆಯೊಂದಿಗೆ ಸೇವಿಸುತ್ತಾ ಬಂದರೆ ಬೊಜ್ಜು ಕರಗುತ್ತದೆ.

*ನೆಗಡಿಯಲ್ಲಿ ಕಾಳುಮೆಣಸಿನ ಚೂರ್ಣವನ್ನು  ಬೆಲ್ಲದ ಜೊತೆ ಸೇರಿಸಿ ಸೇವಿಸುವುದರಿಂದ ಉತ್ತಮ

*ಮೊಡವೆಗೆ ಕಾಳುಮೆಣಸಿನ ಚೂರ್ಣವನ್ನು ವೀಳ್ಯದೆಲೆ ರಸದೊಂದಿಗೆ ಹಚ್ಚಬೇಕು.

*ಕಾಳುಮೆಣಸು ಶ್ರೇಷ್ಠ ಕಫಹರವೂ ಕೂಡ ಆಗಿದೆ.

click me!