
ಮೈಸೂರು : ನಟ ಪ್ರಕಾಶ್ ರೈ ಹಾಗೂ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದೆ. ನಿನ್ನೆ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ 1 ರು. ಮಾನನಷ್ಟ ಮೊಕದ್ದಮೆ ಹಾಕಿದ ಹಿನ್ನೆಲೆಯಲ್ಲಿ ಸಿಂಹ ತುರ್ತು ಸುದ್ದಿಗೋಷ್ಠಿ ನಡೆಸಿ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಸಮಾಜದಲ್ಲಿ ಮಾನ ಮರ್ಯಾದೆ ಇರುವವರ ಬೆಲೆ ಒಂದೇ ರು. ಎಂದು ಅವರೇ ಒಪ್ಪಿ ಕೊಂಡಿದ್ದಾರೆ. ಪ್ರಕಾಶ್ ರೈಗೆ ಅಭಿನಂದನೆ. ರೀಲ್ ಹಾಗೂ ರಿಯಲ್ ಲೈಫ್’ನಲ್ಲಿ ಪ್ರಕಾಶ್ ರೈಗೆ ಕೊಡುವ ಬೆಲೆ ಮೂರು ಕಾಸಿನದ್ದಾಗಿದೆ. ಒಂದು ರು. ಬದಲಿಗೆ ಮೂರು ಕಾಸಿಗೆ ಮಾನನಷ್ಟ ಮೊಕದ್ದಮೆ ಹಾಕಲಿ ಎಂದಿದ್ದಾರೆ.
ನಾನು ಇಲ್ಲದ ವೇಳೆ ಲೀಗಲ್ ನೋಟಿಸ್ ಬಂದಿತ್ತು. ಅದರಲ್ಲಿ ಪ್ರಕಾಶ್ ರಾಜ್, ಜುಬಿಲಿ ಹಿಲ್ಸ್ ಹೆಸರಲ್ಲಿ ಬಂದಿತ್ತು. ನನಗೆ ಗೊಂದಲವಾಗಿ ಅವರು ರೈ ಅಥವಾ ರಾಜ್ ಎಂದು ಸ್ಪಷ್ಪಡಿಸಬೇಕು ಎಂದು ಹೇಳಿದ್ದೇನೆ. ಸಿನಿಮಾದಲ್ಲಿ ಹೆಸರು ಬದಲಿಸುವಂತೆ ಊರಿಗೊಂದು ಹೆಸರು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೇಟಿ ಸೇರಿದಂತೆ ಯಾವ ವಿಚಾರವನ್ನೂ ಕೂಡ ನಾನು ವೈಯಕ್ತಿಕವಾಗಿ ಎಳೆದು ತಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಎನ್ನುವವರು ಪ್ರಕಾಶ್ ರೈ ಬಗ್ಗೆ ಬರೆದಿದ್ದರು. ಅದನ್ನು ನಾನು ಶೇರ್ ಮಾಡಿದ್ದೇನೆ. ಅದು ನನ್ನ ಅಭಿಪ್ರಾಯವಲ್ಲ.ನನ್ನ ಮೇಲೆ ದಾವೆ ಹಾಕಲು ಬರುವುದಿಲ್ಲ. ನಾನೂ ಈಗಲೂ ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಕೋರ್ಟ್ ವಿವರಣೆ ಕೇಳಿದಲ್ಲಿ ನಾನು ಉತ್ತರ ನೀಡುತ್ತೇನೆ. ಅವರು ಅನಂತ್ ಕುಮಾರ್ ಹೆಗಡೆಗೆ ಮತ ಹಾಕಬೇಡಿ ಎನ್ನುತ್ತಾರೆ. ರೈ ತಾವು ಅಷ್ಟು ದೊಡ್ಡವರು ಎಂದುಕೊಂಡಿದ್ದರೆ ರಾಜ್ಯದ 224 ಕ್ಷೇತ್ರಗಳಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸಲಿ. ನಾನು ಸೋಲಿಸಿ ಕಳಿಸುತ್ತೇನೆ. ಮೈಸೂರಿನಲ್ಲಿ ಸಿಎಂ ಆಯ್ಕೆಯಾಗಿ 11 ತಿಂಗಳಲ್ಲೇ ನಾನು ಗೆದ್ದು ತೋರಿಸಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.