ಕಂಟ್ರಿಡಾಗ್, ಸೈಕೋ.. ವೆಜಿಟೇರಿಯನ್... ಪ್ರಥಮ್ ವರ್ಸಸ್ ಭುವನ್

Published : Jul 24, 2017, 09:45 AM ISTUpdated : Apr 11, 2018, 12:37 PM IST
ಕಂಟ್ರಿಡಾಗ್, ಸೈಕೋ.. ವೆಜಿಟೇರಿಯನ್... ಪ್ರಥಮ್ ವರ್ಸಸ್ ಭುವನ್

ಸಾರಾಂಶ

ಶೂಟಿಂಗ್ ಮುಗಿದು ಪ್ಯಾಕಪ್ ಆದ ಮೇಲೆ ಸಂಜನಾಳನ್ನು ಪ್ರಥಮ್ ಕೆಣಕಿದ್ದಾರೆ. ಭುವನ್ ಮಾತು ಯಾಕೆ ಕೇಳ್ತೀಯಾ ಎಂದು ಸಂಜನಾಳ ಜೊತೆ ಪ್ರಥಮ್ ತಗಾದೆ ತೆಗೆದಿದ್ದಾರೆ. ಆಗ ಮಧ್ಯಪ್ರವೇಶಿಸಿದ ಭುವನ್'ರ ತೊಡೆಯನ್ನು ಕಚ್ಚಿ ಪ್ರಥಮ್ ಗಾಯಗೊಳಿಸುತ್ತಾರೆ.

ಬೆಂಗಳೂರು: ಬಿಗ್'ಬಾಸ್ ಶೋನಿಂದ ಶುರುವಾದ ಪ್ರಥಮ್ ಹುಚ್ಚಾಟ ಇದೀಗ ಶೋ ಆಚೆಯೂ ಭರ್ಜರಿಯಾಗಿ ಮುಂದುವರಿದಿದೆ. ತಿಂಗಳುಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ ವಿವಾದ ಸೃಷ್ಟಿಸಿದ್ದ ಪ್ರಥಮ್ ಇದೀಗ ಭುವನ್ ಪೊನ್ನಣ್ಣನವರ ತೊಡೆಯನ್ನು ಕಚ್ಚಿ ಗಾಯಗೊಳಿಸಿದ ಆರೋಪ ಎದುರಿಸುತ್ತಿದ್ದಾರೆ. ಬಿಗ್'ಬಾಸ್'ನಲ್ಲಿ ಸಹ ಸ್ಪರ್ಧಿಯಾಗಿದ್ದ ಭುವನ್ ಅವರೇ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ವಿರುದ್ಧ ದೂರು ದಾಖಲಿಸಿದ್ದಾರೆ.

ಏನು ಆರೋಪ?
ಭುವನ್ ಪೊನ್ನಣ್ಣ ನೀಡಿರುವ ದೂರಿನ ಪ್ರಕಾರ, "ಸಂಜು ಮತ್ತು ನಾನು" ಧಾರಾವಾಹಿ ಶೂಟಿಂಗ್ ವೇಳೆ ಘಟನೆ ನಡೆದಿರುವುದು ತಿಳಿದುಬಂದಿದೆ. ಪ್ರಥಮ್'ನ ಕೈ ಮೇಲೆ ಸಂಜನಾ ಕೈಯಿಟ್ಟು ಪ್ರಾಮಿಸ್ ಮಾಡುವ ದೃಶ್ಯದ ಚಿತ್ರೀಕರಣವಿತ್ತು. ಇದಕ್ಕೆ ಸಂಜನಾ ಒಪ್ಪಿರಲಿಲ್ಲ. ಭುವನ್ ಅವರೇ ಸಂಜನಾರನ್ನು ಅಭಿನಯಿಸಲು ಒಪ್ಪಿಸಿದ್ದರು. ಅಂದಿನ ಶೂಟಿಂಗ್ ಮುಗಿದು ಪ್ಯಾಕಪ್ ಆದ ಮೇಲೆ ಸಂಜನಾಳನ್ನು ಪ್ರಥಮ್ ಕೆಣಕಿದ್ದಾರೆ. ಭುವನ್ ಮಾತು ಯಾಕೆ ಕೇಳ್ತೀಯಾ ಎಂದು ಸಂಜನಾಳ ಜೊತೆ ಪ್ರಥಮ್ ತಗಾದೆ ತೆಗೆದಿದ್ದಾರೆ. ಆಗ ಮಧ್ಯಪ್ರವೇಶಿಸಿದ ಭುವನ್'ರ ತೊಡೆಯನ್ನು ಕಚ್ಚಿ ಪ್ರಥಮ್ ಗಾಯಗೊಳಿಸುತ್ತಾರೆ. ಪ್ರಥಮ್ ಕಚ್ಚುತ್ತಿರುವ ದೃಶ್ಯವಿರುವ ಫೋಟೋ ತನ್ನ ಬಳಿ ಇದೆ ಎಂದು ಸಂಜನಾ ಈ ವೇಳೆ ಹೇಳಿದ್ದಾರೆ.

ಹುಚ್ಚಾಟ ಸಹಿಸಿಕೊಂಡಿದ್ದೇ ಹೆಚ್ಚು:
ಇದೇ ವೇಳೆ, ಪ್ರಥಮ್ ವಿರುದ್ಧ ಭುವನ್ ಕಿಡಿಕಾರಿದ್ದಾರೆ. ಸಂಜು ಮತ್ತು ನಾನು ಸೀರಿಯಲ್'ಗೋಸ್ಕರ ತಾನು ಪ್ರಥಮ್'ನ ಎಲ್ಲಾ ಹುಚ್ಚಾಟ ಮತ್ತು ಅಸಭ್ಯತನಗಳನ್ನು ಸಹಿಸಿಕೊಂಡು ಬಂದೆ. ಇಷ್ಟು ದಿನ ಇವನ ಟಾರ್ಚರ್ ಸಹಿಸಿಕೊಂಡು ಬಂದಿರುವುದೇ ದೊಡ್ಡ ಕೆಲಸ ಎಂದು ಭುವನ್ ಅವರು ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ. ತನ್ನ ತೊಡೆಯನ್ನು ಪ್ರಥಮ್ ಕಚ್ಚಿದ ಬಗ್ಗೆ ಮಾತನಾಡಿದ ಭುವನ್, " ಸುಮ್ಮನೆ ಕಚ್ಚುವುದು ಮತ್ತು ಪರಚುವುದು ಬೇರೆ... ಆದರೆ, ಮಾಂಸ ಹರಿದುಬರುವಂತೆ ಕಚ್ಚುವುದೆಂದರೆ ಆತನ ಮನಸು ವಿಕೃತವಾಗಿರಬೇಕು. ಪ್ರಥಮ್'ಗೆ ವೈದ್ಯರಿಂದ ಟ್ರೀಟ್ಮೆಂಟ್ ಕೊಡಿಸುವ ಅಗತ್ಯವಿದೆ" ಎಂದು ಹೇಳಿದ್ದಾರೆ.

ಕಂಟ್ರಿ ಡಾಗ್:
ಭುವನ್ ಪೊನ್ನಣ್ಣ ನಿನ್ನೆ ತಮ್ಮ ಫೇಸ್'ಬುಕ್ ಪೇಜ್'ನಲ್ಲಿ ಈ ಬಗ್ಗೆ ಕಮೆಂಟ್ ಹಾಕಿದ್ದು, ಪ್ರಥಮ್'ರನ್ನು ಹುಚ್ಚು ನಾಯಿಗೆ ಹೋಲಿಸಿದ್ದಾರೆ. ಪ್ರಥಮ್'ರ ಹೆಸರು ಹೇಳದೆಯೇ ಅವರ ಮೇಲೆ ಆರೋಪ ಮಾಡಿದ್ದಾರೆ. "ಇವತ್ತು ಶೂಟಿಂಗಿನಲ್ಲಿ ನಂಗೆ ಒಂದು ಹುಚ್ ಕಂತ್ರಿ ನಾಯಿ ಕಚ್ಚಿತು. ಚುಚ್ಚು ಮದ್ದು ಕೊಟ್ರು ವೈದ್ಯರು. ಈ ನಾಯಿ ಸುಮಾರು ಜನರಿಗೆ ಕಚ್ಚಿದೆಯಂತೆ. ಶೂಟಿಂಗಿನಲ್ಲಿ ಎಲ್ಲ ಮಾತಾಡ್ಕೋತಾ ಇದ್ರು" ಎಂದು ಭುವನ್ ಬರೆದುಕೊಂಡಿದ್ದಾರೆ. "A psyco country dog bit me in the shooting set today. Got an injection. I heard its bitten many others befor ! #wierdworld" ಎಂದು ಇಂಗ್ಲೀಷ್'ನಲ್ಲಿ ಸ್ಟೇಟಸ್ ಹಾಕಿದ್ದಾರೆ ಭುವನ್.

ಪ್ರಥಮ್ ರಿಯಾಕ್ಷನ್:
ಭುವನ್'ರ ತೊಡೆ ಕಚ್ಚಿ ಗಾಯಗೊಳಿಸಿದ ಆರೋಪವನ್ನು ಪ್ರಥಮ್ ಈ ವೇಳೆ ತಳ್ಳಿಹಾಕಿದ್ದಾರೆ. ಫೇಸ್ಬುಕ್'ನಲ್ಲಿ ನೇರವಾಗಿ ಪ್ರತಿಕ್ರಿಯಿಸಿರುವ ಪ್ರಥಮ್, ತನಗೆ ಭುವನ್ ಮಾಂಸದ ಮೇಲೆ ಆಸೆ ಇಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ರೂಮಲ್ಲಿ ಸೇರಿಕೊಂಡು ಏನೇನೋ ಮಾಡ್ಕೊಂಡು ತನ್ನ ಮೇಲೆ ಆರೋಪ ಮಾಡಬೇಡ ಎಂದು ಹೇಳಿರುವ ಪ್ರಥಮ್, ಇದೀಗ ಭುವನ್ ವಿರುದ್ಧ ತಾನೂ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

"ಭುವನ್ ಏನಪ್ಪಾ ನಿನ್ನ ಪ್ರಾಬ್ಲಮ್? ಒಳ್ಳೆ ಬುದ್ಧಿ ಕಲಿಯಪ್ಪ... ನಾನು ಸಂಪೂರ್ಣ ಸಸ್ಯಹಾರಿ. ನಿನ್ನ ಮಾಂಸದ ಮೇಲೆ ಆಸೆ ಇಲ್ಲಪ್ಪ. ನೀನು ರೂಮ್'ಲಿ ಸೇರ್ಕೊಂಡು ಏನೇನೋ ಮಾಡ್ಕೊಂಡು ನನ್ನ ಮೇಲೆ ಎಗರಾಡಬೇಡಪ್ಪ. ನೆನ್ನೆ ಮೊದಲು ಕೈಮಾಡಿದ್ದು ನೀನು. ನಾನು ಪೊಲೀಸ್ ಕಂಪ್ಲೇಂಟ್ ಕೊಡಲಿದ್ದೇನೆ. ಶುಭವಾಗಲಿ ನಿನ್ನ ಫ್ಯೂಚರ್ ಜರ್ನಿಗೆ" ಎಂದು ಪ್ರಥಮ್ ಫೇಸ್ಬುಕ್'ನಲ್ಲಿ ಸ್ಟೇಟಸ್ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ