
ವರದಿ: ಸುರೇಶ್ ನಾಯ್ಕ್, ಹಾವೇರಿ
ಹಾವೇರಿ: ಇಲ್ಲಿಯ ಹಿರೇಕೇರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿರುವ ಶಾಂತೇಶ ದೇವಸ್ಥಾನದಲ್ಲಿ ವಿಜಯದಶಮಿ ದಿನಂದು ಭಕ್ತರ ದಂಡೇ ಹರಿದುಬರುತ್ತದೆ. ಈ ಭಕ್ತರಲ್ಲಿ ಮಹಿಳೆಯರೇ ಬಹುತೇಕ ತುಂಬಿರುತ್ತಾರೆ. ಕಾರಣ, ಇಲ್ಲಿ ಸಂತಾನಹೀನ ಮಹಿಳೆಯರಿಗೆ ಇದೇ ವಿಜಯದಶಮಿಯಂದು ಶಾಂತೇಶ ದೇವರ (ಆಂಜನೇಯ) ಪ್ರಸಾದ ನೀಡಲಾಗುತ್ತದೆ. ಇಲ್ಲಿ ಮದ್ಯಾಹ್ನ 2 ಗಂಟೆಯಿಂದ ನಾಲ್ಕು ಗಂಟೆಯವರೆಗೆ ಮಾತ್ರ ಪ್ರಸಾದ ನೀಡಲಾಗುತ್ತದೆ.
ಈ ಅರ್ಚಕರ ಪೂರ್ವಜರ ಕಾಲದಿಂದಲೂ ಇಲ್ಲಿ ಗಿಡಮೂಲಿಕೆಗಳನ್ನು ಬಳಸಿ ಸಿದ್ಧಗೊಳಿಸಿದ ಶಾಂತೇಶನ ಪ್ರಸಾದ ನೀಡುತ್ತಾ ಬರಲಾಗಿದೆ. ಮಕ್ಕಳೇ ಆಗುವುದಿಲ್ಲ ಎಂದು ವೈದ್ಯರೇ ಕೈಚೆಲ್ಲಿದ ಪ್ರಕರಣಗಳಲ್ಲಿ ಜನರು ಇಲ್ಲಿ ಬಂದು ಪ್ರಸಾದ ಸೇವಿಸಿದಾಗ ಸಂತಾನ ಹೊಂದಿರುವುದುಂಟು. ನವರಾತ್ರಿಯ ಒಂಬತ್ತು ದಿನಗಳ ಕಾಲ ಪೂಜೆ , ಹೋಮ, ಹವನ ಮಾಡಿ ಪ್ರಸಾದ ಮಾಡಲಾಗುತ್ತದೆ. ಮಹಿಳೆಯರಿಗೆ ತೆಂಗಿನಕಾಯಿ ಉಡಿ ತುಂಬಿದ ಬಳಿಕ ಬಾಳೆಹಣ್ಣಿನೊಂದಿಗೆ ಪ್ರಸಾದವನ್ನು ಅರ್ಚಕರು ನೀಡುತ್ತಾರೆ.
ಯಾವುದೇ ಧರ್ಮಭೇದವಿಲ್ಲದೇ ಎಲ್ಲ ವರ್ಗದ ಜನರು ವಿಜಯದಶಮಿ ದಿನದಂದು ಈ ದೇವಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸುವುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.