ಇಂದಿನಿಂದ ವಿದ್ಯುತ್ ದರ ಏರಿಕೆ?

By Suvarna Web DeskFirst Published Apr 1, 2017, 4:47 PM IST
Highlights

ಇಂದಿನಿಂದ ವಿದ್ಯುತ್ ದರದಲ್ಲಿ ಏರಿಕೆಯಾಗಲಿದೆ ಎಂದು ಕೆಇಆರ್ ಸಿ ಅಧ್ಯಕ್ಷ ಎಂ.ಕೆ ಶಂಕರಲಿಂಗೇಗೌಡ ಹೇಳಿದ್ದಾರೆ.

ಬೆಂಗಳೂರು (ಏ.01): ಇಂದಿನಿಂದ ವಿದ್ಯುತ್ ದರದಲ್ಲಿ ಏರಿಕೆಯಾಗಲಿದೆ ಎಂದು ಕೆಇಆರ್ ಸಿ ಅಧ್ಯಕ್ಷ ಎಂ.ಕೆ ಶಂಕರಲಿಂಗೇಗೌಡ ಹೇಳಿದ್ದಾರೆ.
ಪ್ರತಿ ಯೂನಿಟ್ ಗೆ ಎಷ್ಟು ಏರಿಕೆಯಾಗಲಿದೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ. ಬೆಸ್ಕಾಂ ಹೊರತುಪಡಿಸಿ ಎಲ್ಲಾ ಎಸ್ಕಾಂಗಳಿಂದ ಡಾಟಾ ಸಂಗ್ರಹಿಸಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಐದು ದಿನಗಳೊಳಗೆ ದರ ನಿಗದಿ ಪಡಿಸುವುದಾಗಿ ಹೇಳಿದೆ.
ಬರ ಪರಿಸ್ಥಿತಿ ಹಾಗೂ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್ ಗೆ 1.48 ಪೈಸೆ ಬೆಲೆ ಏರಿಸಬೇಕೆಂದು ಎಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
2012-13 ರಲ್ಲಿ ಎಸ್ಕಾಂ 73 ಪೈಸೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಕೇವಲ 13 ಪೈಸೆ ಮಾತ್ರ ಏರಿಕೆ ಮಾಡಿತ್ತು. 2013-14, ಮತ್ತು 2016-17 ರಲ್ಲಿ 1.02 ಪೈಸೆ ಏರಿಕೆಗೆ ಶಿಫಾರಸು ಮಾಲಾಗಿತ್ತು, ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 80 ಪೈಸೆ ಏರಿಕೆ ಮಾಡಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಫೆಬ್ರವರಿಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಪ್ರತಿದಿನ 280 ಮೆಗಾ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಎಲ್ಲಿಯೂ ಪವರ್  ಕಟ್ ಸಮಸ್ಯೆ ಕೇಳಿ ಬರುತ್ತಿಲ್ಲ ಎಂದು ಕೆಪಿಸಿಎಲ್ ಎಂಡಿ ಕುಮಾರ್ ನಾಯಕ್ ಹೇಳಿದ್ದಾರೆ.

 

click me!