ರೆಡ್ಡಿಗೆ ಗೃಹ, ಹೊಸಬರಿಗೆ ಖಾತೆ ಹಂಚಿಕೆ, ಕೆಲವರ ಖಾತೆ ಬದಲು: ಕೊನೆ ಕ್ಷಣದಲ್ಲಿ ರೈ'ಗೆ ತಪ್ಪಿದ ಹೋಂ

Published : Sep 01, 2017, 07:18 PM ISTUpdated : Apr 11, 2018, 12:56 PM IST
ರೆಡ್ಡಿಗೆ ಗೃಹ, ಹೊಸಬರಿಗೆ ಖಾತೆ ಹಂಚಿಕೆ, ಕೆಲವರ ಖಾತೆ ಬದಲು: ಕೊನೆ ಕ್ಷಣದಲ್ಲಿ ರೈ'ಗೆ ತಪ್ಪಿದ ಹೋಂ

ಸಾರಾಂಶ

ಜೊತೆಗೆ ಇಬ್ಬರ ಖಾತೆ ಬದಲಾಯಿಸಲಾಗಿದ್ದು, ರಮೇಶ್ ಜಾರಕಿ ಹೊಳಿಯವರಿಗೆ ಸಹಕಾರ ಹಾಗೂ ಸಂತೋಷ್ ಲಾಡ್  ಅವರಿಗೆ ಕಾರ್ಮಿಕ ಜೊತೆಗೆ ಕೌಶಲ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, , ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ ಅವರಿಗೆ ರಾಜ್ಯ ಖಾತೆಯಿಂದ ಸಂಪುಟಕ್ಕೆ ಬಡ್ತಿ ನೀಡಲಾಗಿದೆ.

ಬೆಂಗಳೂರು(.01): ಸಚಿವ ಸಂಪುಟ ವಿಸ್ತರಣೆಯಾದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಗೃಹ , ಹೆಚ್. ಎಂ. ರೇವಣ್ಣ ಅವರಿಗೆ ಸಾರಿಗೆ, ಆರ್​.ಬಿ. ತಿಮ್ಮಾಪುರ್'ಗೆ ಅಬಕಾರಿ, ಗೀತಾ ಮಹದೇವ್ ಪ್ರಸಾದ್ ಅವರಿಗೆ ಸಕ್ಕರೆ ಮತ್ತು ಸಣ್ಣ ಕೈಗಾರಿಗೆ ನೀಡಲಾಗಿದೆ.

ರೇವಣ್ಣ ಮತ್ತು ತಿಮ್ಮಾಪುರ್ ಅವರು ಸಂಪುಟ ದರ್ಜೆ ಗೀತಾ ಅವರು ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗಿದೆ. ಜೊತೆಗೆ ಇಬ್ಬರ ಖಾತೆ ಬದಲಾಯಿಸಲಾಗಿದ್ದು, ರಮೇಶ್ ಜಾರಕಿ ಹೊಳಿಯವರಿಗೆ ಸಹಕಾರ ಹಾಗೂ ಸಂತೋಷ್ ಲಾಡ್  ಅವರಿಗೆ ಕಾರ್ಮಿಕ ಜೊತೆಗೆ ಕೌಶಲ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, , ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ ಅವರಿಗೆ ರಾಜ್ಯ ಖಾತೆಯಿಂದ ಸಂಪುಟಕ್ಕೆ ಬಡ್ತಿ ನೀಡಲಾಗಿದೆ.

ಬಿಜೆಪಿ ನಾಯಕರಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ಅರಣ್ಯ ಸಚಿವ ರಮನಾಥ್ ರೈ ಅವರಿಗೆ ನೀಡಬೇಕಾಗಿದ್ದ ಗೃಹ ಖಾತೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡಲಾಗಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದಗೆ ಆಸ್ಪದ ನೀಡದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?