28ಕ್ಕೆ ‘ಪೊರ್ಕಿ ಹುಚ್ಚವೆಂಕಟ್‌' ಬಿಡುಗಡೆ

By Suvarna Web DeskFirst Published Apr 23, 2017, 8:06 AM IST
Highlights

ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ನಾನು ಜೀವಿಸುತ್ತಿದ್ದೇನೆ. ಸರ್ಕಾರ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಹಿತಾಸಕ್ತಿ ಕಾಯಬೇಕು, 35 ಸಾವಿರ ಪೌರಕಾರ್ಮಿ​ಕರನ್ನು ಕಾಯಂಗೊಳಿಸಬೇಕು ಎಂದು ಹುಚ್ಚ ವೆಂಕಟ್ ಒತ್ತಾಯಿಸಿದ್ದಾರೆ.

ಮೈಸೂರು: ಮುಂದಿನ ಚುನಾವಣೆ ವೇಳೆಗೆ ‘ಹುಚ್ಚ ವೆಂಕಟ್‌ ಸೇನೆ'ಯ ರಾಜಕೀಯ ಪಕ್ಷ ಎಲ್ಲೆಡೆ ತಲೆ ಎತ್ತಲಿದ್ದು ನನ್ನ ಅನುಯಾಯಿಗಳು ಸ್ಪರ್ಧಿಸಲಿದ್ದಾರೆ. ಭವಿಷ್ಯದಲ್ಲಿ ನಾನು ಪ್ರಧಾನ ಮಂತ್ರಿಯೂ ಆಗಬಹುದು ಎಂದು ನಟ ಹುಚ್ಚ ವೆಂಕಟ್‌ ಹೇಳಿಕೊಂಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋ ಷ್ಠಿಯಲ್ಲಿ ಸಿನಿಮಾ ಶೈಲಿಯಲ್ಲೇ ಮಾತನಾಡಿದ ಅವರು, ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ನಾನು ಜೀವಿಸುತ್ತಿದ್ದೇನೆ. ಸರ್ಕಾರ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಹಿತಾಸಕ್ತಿ ಕಾಯಬೇಕು, 35 ಸಾವಿರ ಪೌರಕಾರ್ಮಿ​ಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

‘ಪೊರ್ಕಿ ಹುಚ್ಚ ವೆಂಕಟ್‌' ಸಿನಿಮಾ ಏ.28 ರಂದು ರಾಜ್ಯಾ​ದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಾಯಕ, ನಿರ್ದೇಶಕರೂ ಆಗಿ​ರುವ ವೆಂಕಟ್‌ ಮಾಹಿತಿ ನೀಡಿದರು. ನನ್ನ ತಾಯಿ ಯಾವಾಗಲೂ ಪೊರ್ಕಿ ಎಂದು ಕರೆಯುತ್ತಿದ್ದರು. ಆದ್ದರಿಂದ ಪೊರ್ಕಿ ಹುಚ್ಚ ವೆಂಕಟ್‌ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ ಎಂದರು.

click me!