464 ಗೆಜೆಟೆಡ್‌ ಪ್ರೊಬೇಷನರಿ ಅಂತಿಮ ಪಟ್ಟಿ

By Suvarna Web DeskFirst Published Apr 23, 2017, 7:44 AM IST
Highlights

ಆಕ್ಷೇಪಣೆಗಳಿದ್ದಲ್ಲಿ 30 ದಿನದೊಳಗೆ ಸಲ್ಲಿಸಿ | ಉಪವಿಭಾಗಾಧಿಕಾರಿಗಳಾಗಿ 53 ಅಭ್ಯರ್ಥಿಗಳು ಆಯ್ಕೆ | ಡಿವೈಎಸ್‌ಪಿಗೆ 32 ಅಭ್ಯರ್ಥಿಗಳು

ಬೆಂಗಳೂರು (ಏ.23): ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‌ಸಿ)2014ರ ಸಾಲಿನ 464 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.

ಫಲಿತಾಂಶ ಕುರಿತ ಆಕ್ಷೇಪಣೆಗಳಿದ್ದಲ್ಲಿ ಆಯ್ಕೆ ಪಟ್ಟಿಪ್ರಕಟಗೊಂಡ 30 ದಿನದೊಳಗೆ ಸಲ್ಲಿಸಬಹುದಾಗಿದೆ. 30 ದಿನಗಳ ನಂತರ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಕ್ಷೇಪಣೆ ಸಲ್ಲಿಸ ಬಯಸುವವರು, ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01 ಇಲ್ಲಿಗೆ ಕಳುಹಿಸಬೇಕಾಗಿ ಕೋರಲಾಗಿದೆ. ಫಲಿತಾಂಶಕ್ಕಾಗಿ www.kpsc.kar.nic.in/list ಸಂಪರ್ಕಿಸಬಹುದಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳು: 2014ರ ಸಾಲಿನಲ್ಲಿ ಉಪವಿಭಾಗಾಧಿಕಾರಿಗಳಾಗಿ 53 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ ಮೈಸೂರಿನ ಸಿದ್ಧಾರ್ಥನಗರದ ಆರ್‌.ಐಶ್ವರ್ಯ, ಬಾಗಲಕೋಟೆ ಜಿಲ್ಲೆ ಬನಶಂಕರಿ ಗಲ್ಲಿಯ ರಮೇಶ್‌ ಕೋಲಾರ, ಬೆಳಗಾವಿ ಜಿಲ್ಲೆ ಮಿಲನ ನಗರದ ಸಂತೋಷ್‌ ಕಮಗೌಡ, ಕೋಲಾರ ಜಿಲ್ಲೆ ಪಡವನಹಳ್ಳಿ ಪಿ.ವಿ.ಭೈರಪ್ಪ. ದಾರವಾಢ ಜಿಲ್ಲೆ ಶ್ರೀರಾಮನಗರದ ಮಂಜುನಾಥ ದೊಂಬಾರ್‌ ಟಾಪರ್‌ಗಳಾಗಿದ್ದಾರೆ.

ಡಿವೈಎಸ್‌ಪಿ 32 ಅಭ್ಯರ್ಥಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿಯಾಗಿ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ತಹಶೀಲ್ದಾರ್‌ ಆಗಿ 79, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾಗಿ 45, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರಾಗಿ 11, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ 42, ಖಜಾನೆ ಸಹಾಯಕ ಅಧಿಕಾರಿಯಾಗಿ 25, ಬಂಧೀಖಾನೆ ಎಎಸ್‌ಪಿಯಾಗಿ 7, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾಗಿ 1, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿ 3, ಕರ್ನಾಟಕ ಆಡಳಿತಾತ್ಮಕ ಸೇವೆಯ ಉಪ ವಿಭಾಗಾಧಿಕಾರಿಯಾಗಿ 4, ವಾಣಿಜ್ಯ ತೆರಿಗೆ ಇಲಾಖೆ ಉಪ ವಿಭಾಗಾಧಿಕಾರಿಯಾಗಿ 44, ಹಿಂದುಳಿದ ವರ್ಗಗಳ ಕಲ್ಯಾಣ ಆಧಿಕಾರಿಯಾಗಿ 5, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಹೈದರಾಬಾದ್‌ ಕರ್ನಾಟಕ: ಇನ್ನು ಹೈದರಾಬಾದ್‌ ಕರ್ನಾಟಕ ಮೀಸಲಾತಿ (ಸಂವಿಧಾನದ 371 ಜೆ ಅಡಿ ಹೈ.ಕಗೆ ದೊರೆತ ವಿಶೇಷ ಸ್ಥಾನಮಾನ ನೇಮಕಾತಿ ಅಡಿ) ಡಿವೈಎಸ್‌ಪಿ ಯಾಗಿ 6, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಹಾಯಕ ಕಾರ್ಯದರ್ಶಿಯಾಗಿ 4. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಯಾಗಿ 2, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿ 1, ವಾಣಿಜ್ಯ ತೆರಿಗೆ ಇಲಾಖೆ ಉಪ ವಿಭಾಗಾಧಿಕಾರಿಯಾಗಿ 11, ತಹಶೀಲ್ದಾರ್‌ ಆಗಿ 35, ವಾಣಿಜ್ಯತೆರಿಗೆ ಇಲಾಖೆ ಅಧಿಕಾರಿಯಾಗಿ 13, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ವಿಭಾಗಾಧಿಕಾರಿಗಳಾಗಿ 3, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿ 3. ಸಹಾಯಕ ಖಜಾನೆ ಅಧಿಕಾರಿಯಾಗಿ 4, ಬಂದೀಖಾನೆ ಸಹಾಯಕ ವರಿಷ್ಠಾಧಿಕಾರಿಯಾಗಿ 2, ಕೃಷಿ ಮಾರುಕಟ್ಟೆಸಹಾಯಕ ನಿರ್ದೆಶಕರಾಗಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

 

 

click me!