
ಮೈಸೂರು(ಅ.10): ಮೈಸೂರು ದಸರಾದ ವಿಶೇಷತೆಯಲ್ಲೊಂದಾಧ ಜಟ್ಟಿ ಕಾಳಗದಲ್ಲಿ ಇದೀಗ ವಾಗ್ವಾದ ಶುರುವಾಗಿದೆ. ವಜ್ರಮುಷ್ಠಿ ಕಾಳಗದ ಜಗಜಟ್ಟಿಗಳಿಗೆ ಪ್ರವೇಶ ನಿಷೇಧಿಸಿದ ಹಿನ್ನೆಲೆಯಲ್ಲಿ ಕಾಳಗಕ್ಕೆ ತಯಾರಾಗಿ ಬಂದಿದ್ದ ಜಗಜಟ್ಟಿಳು ಅರಮನೆಯಿಂದ ಹೊನಡೆದಿದ್ದಾರೆ.
ವಜ್ರಮುಷ್ಠಿ ಕಾಳಗಕ್ಕಿಳಿಯಬೇಕಾದ ನಾಲ್ಕು ಜಗಜಟ್ಟಿಗಳು ಅರಮನೆಗೆ ಪ್ರವೇಶ ಮಾಡಬೇಕಾದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದರು. ಇದರಿಂದ ಕೋಪಗೊಂಡ ಜಟ್ಟಿಗಳು ನಾವು ಈ ಕಾಳಗದಲ್ಲಿ ಪಾಲ್ಗೊಳ್ಳುವುದಿದ್ದಲ್ಲದೆ, ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ಹಿಂತಿರುಗಿದ್ದಾರೆ. ಇದೇ ಮೊದಲ ಬಾರಿ ಜಟ್ಟಿಗಳನ್ನು ಇದೇ ಮೊದಲ ಬಾರಿ ತಡೆದಿದ್ದು, ಇದಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.
ಈ ಕುರಿತಾಗಿ ಮಾತನಾಡಿರುವ ಜಟ್ಟಿಗಳು 30 ವರ್ಷದಿಂದ ಯಾವತ್ತೂ ಹೀಗಾಗಿರಲಿಲ್ಲ. ಇದರಿಂದ ನಮಗೆ ಬೇಜಾರಾಗಿದೆ ಹಿರಿಯ ಅಧಿಕಾರಿಗಳು ಬಂದರಷ್ಟೇ ನಾವು ಇದರಲ್ಲಿ ಪಾಲ್ಗೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.