ಐತಿಹ್ಯ 406 ನೇ ದಸರಾಗೆ ಕ್ಷಣಗಣನೆ: ಜಂಬೂ ಸವಾರಿಗೆ ಬಿಗಿ ಭದ್ರತೆ

Published : Oct 10, 2016, 09:49 PM ISTUpdated : Apr 11, 2018, 12:57 PM IST
ಐತಿಹ್ಯ 406 ನೇ ದಸರಾಗೆ ಕ್ಷಣಗಣನೆ: ಜಂಬೂ ಸವಾರಿಗೆ ಬಿಗಿ ಭದ್ರತೆ

ಸಾರಾಂಶ

ಅದೆಷ್ಟೋ ದೂರದಿಂದ ದೇಶ ವಿದೇಶಿಗ ಪ್ರವಾಸಿಗರನ್ನು ಆಕರ್ಷಿಸುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡ ಅಧಿದೇವತೆ ಹೊತ್ತು ಸಾಗಿ 406 ನೇ ದಸರಾ ಮಹೋತ್ಸವವನ್ನ ಐತಿಹ್ಯ ಪುಟದಲ್ಲಿ ಸೇರಿಸಲು ಅರಮನೆ ನಗರಿ ಕೂಡ ಸಜ್ಜಾಗಿದೆ. ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರು ನಗರ ಈಗಾಗಲೇ ಪ್ರವಾಸಿಗರಿಂದ ತುಂಬಿದೆ. ಅದ್ಧೂರಿ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಕೂಡ ಆರಂಭವಾಗಿದೆ. ನಾಡ ಅಧಿದೇವತೆ ಹೊತ್ತು ಸಾಗುವ ಚಿನ್ನದ ಅಂಬಾರಿಯನ್ನು ಕಣ್ಮುಂಬಿಕೊಳ್ಳಲು ಪ್ರವಾಸಿಗರು ಕೌತುಕ ಹಾಗು ಕಾತುರದಿಂದ ಕಾಯುತ್ತಿದ್ದಾರೆ.

ಮೈಸೂರು(ಅ.11): ಅದೆಷ್ಟೋ ದೂರದಿಂದ ದೇಶ ವಿದೇಶಿಗ ಪ್ರವಾಸಿಗರನ್ನು ಆಕರ್ಷಿಸುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡ ಅಧಿದೇವತೆ ಹೊತ್ತು ಸಾಗಿ 406 ನೇ ದಸರಾ ಮಹೋತ್ಸವವನ್ನ ಐತಿಹ್ಯ ಪುಟದಲ್ಲಿ ಸೇರಿಸಲು ಅರಮನೆ ನಗರಿ ಕೂಡ ಸಜ್ಜಾಗಿದೆ.

ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರು ನಗರ ಈಗಾಗಲೇ ಪ್ರವಾಸಿಗರಿಂದ ತುಂಬಿದೆ. ಅದ್ಧೂರಿ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಕೂಡ ಆರಂಭವಾಗಿದೆ. ನಾಡ ಅಧಿದೇವತೆ ಹೊತ್ತು ಸಾಗುವ ಚಿನ್ನದ ಅಂಬಾರಿಯನ್ನು ಕಣ್ಮುಂಬಿಕೊಳ್ಳಲು ಪ್ರವಾಸಿಗರು ಕೌತುಕ ಹಾಗು ಕಾತುರದಿಂದ ಕಾಯುತ್ತಿದ್ದಾರೆ.

2012 ರಿಂದ ನಿರಂತರವಾಗಿ ಅಂಬಾರಿ ಹೊರುತ್ತಿರುವ ಕ್ಯಾಪ್ಟನ್​ ಅರ್ಜುನನೇ ಈ ಬಾರಿ ಕೂಡ ಅಂಬಾರಿ ಹೊರಲಿದ್ದು, ಸತತ ಐದನೇ ಬಾರಿ ಅಂಬಾರಿ ಹೊರುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಭೀತು ಪಡಿಸಲಿದ್ದಾನೆ.

- ಮಧ್ಯಾಹ್ನ 2.16 : ಮುಖ್ಯಮಂತ್ರಿ, ಸಚಿವರಿಂದ ನಂದಿ ಧ್ವಜ ಪೂಜೆ

- ಮಧ್ಯಾಹ್ನ 2.16 : ವಿಜಯದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ

- ಮಧ್ಯಾಹ್ನ 2.45 : ಚಾಮುಂಡಿಯನ್ನ ಹೊತ್ತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ

- ಮಧ್ಯಾಹ್ನ 3.00 : ಪೊಲೀಸ್ ತಂಡ, ಅಶ್ವಾರೋಹಿ ಪಡೆಗಳ ಗಜವಂದನೆ

ಇದಾದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳ, ವಿವಿಧ ಇಲಾಖೆಗಳ 42 ಸ್ತಬ್ಧ ಚಿತ್ರಗಳು, 50 ಕಲಾ ತಂಡಗಳು, ಪೊಲೀಸ್ ಪಡೆಗಳು, ಅಶ್ವಾರೋಹಿ ದಳ ಐತಿಹ್ಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು

ಇನ್ನು, ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2016 ಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ. ನಗರದಾದ್ಯಂತ ಎಲ್ಲೆಡೆ ಖಾಕಿ ಪಡೆ ಹದ್ದಿನ ಕಣ್ಣಿದ್ದು, ಪ್ರತಿ ವಾಹನಗಳು, ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದೆ. ಇನ್ನು, ಸಂಜೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಈ ಬಾರಿ ಈ ಬಾರಿ ಒಂದು ಗಂಟೆ ತಡವಾಗಿ ಆರಂಭವಾಗಲಿದೆ. ಇಷ್ಟಲ್ಲದೆ ಹಸಿರು ದಸರಾ ಹಿನ್ನೆಲೆಯಲ್ಲಿ ಈ ಬಾರಿ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಸಿಡಿಮದ್ದುಗಳ ಪ್ರದರ್ಶನ ಹಾಗೂ ಲೇಸರ್ ಶೋ ಕಾರ್ಯಕ್ರಮ ರದ್ದುಪಡಿಸಲಾಗಿದೆ ಅಂತ ತಿಳಿಸಿದ್ರು. ಆದ್ರೆ 2 ಗಂಟೆಗಳ ಅವಧಿಯ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಮಲ್ಲಕಂಬ ಪ್ರದರ್ಶನ, ಸೇನೆಯಿಂದ ಮೋಟರ್ ಸೈಕಲ್ ಸಾಹಸ ಪ್ರದರ್ಶನ, ಅಶ್ವದಳದಿಂದ ಸಾಹಸ ಪ್ರದರ್ಶನ ಹಾಗೂ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಒಟ್ಟಾರೆ, ಐತಿಹ್ಯ 406 ದಸರಾ ಮಹೋತ್ಸವವನ್ನು ಇತಿಹಾಸದ ಪುಟದಲ್ಲಿ ದಾಖಲಿಸಲು ಮೈಸೂರು ಸನ್ನದ್ಧವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!