
ಎಡಿನ್ಬರ್ಗ್ (ಫೆ.13): ಭಾರತದಲ್ಲಿ ಮುಸ್ಲಿಮ್ ಮಹಿಳೆಯರು ಧರಿಸುವ ಹಿಜಾಬ್ ಚರ್ಚೆಗೊಳಗಾಗುತ್ತಿರುವಾಗ, ಸ್ಕಾಟ್ಲ್ಯಾಂಡ್ ತನ್ನ ಪೊಲೀಸ್ ಪಡೆಯಲ್ಲಿ ಹಿಜಾಬ್ ಧಾರಿಣಿಯರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.
ಜಗತ್ತಿನ ಅತ್ಯುತ್ತಮ ಪೊಲೀಸ್ ಪಡೆಯೆಂದು ಹೆಸರುವಾಸಿಯಾಗಿರುವ ಸ್ಕಾಟ್ಲ್ಯಾಂಡ್ ಪೊಲೀಸ್, ಇನ್ಮುಂದೆ ಮುಸ್ಲಿಮ್ ಮಹಿಳೆಯರ ಹಿಜಾಬ್ ಅಧಿಕೃತ ಸಮವಸ್ತ್ರವಾಗಿರುವುದೆಂದು ಘೋಷಿಸಿದೆಯೆಂದು 'ದಿ ಇಂಡಿಪೆಂಡೆಂಟ್' ವರದಿ ಮಾಡಿದೆ.
ಈ ಕ್ರಮದಿಂದ ಪೊಲೀಸ್ ಪಡೆಯಲ್ಲಿ ವೈವಿಧ್ಯವಿರುವುದು ಅಲ್ಲದೇ ಮುಸ್ಲಿಮ್ ಮಹಿಳೆಯರು ಪೊಲೀಸ್ ಪಡೆಯನ್ನು ಸೇರಲು ಪ್ರೋತ್ಸಾಹ ಕೂಡಾ ಸಿಗುವುದೆಂದು ಹೇಳಲಾಗಿದೆ. ಹಿಜಾಬ್ ಧರಿಸಲು ೨೦೦೧ರಿಂದಲೇ ಅನುಮತಿ ನೀಡಲಾಗಿದ್ದರೂ ಅದು ಸಾರ್ವತ್ರಿಕವಾಗಿರಲಿಲ್ಲ. ಹಿರಿಯ
ಅಧಿಕಾರಿಯ ಅನುಮತಿ ಪಡೆದು ಮುಸ್ಲಿಮ್ ಮಹಿಳೆ ಹಿಜಾಬ್ ಧರಿಸಬಹುದಿತ್ತು.
ಹೊಸ ಕ್ರಮದಿಂದ ಪೊಲೀಸ್ ಪಡೆಯು ಹೆಚ್ಚು ಬಲಗೊಳ್ಳಲಿದೆಯಲ್ಲದೇ, ಉತ್ತಮ ಪೊಲೀಸಿಂಗ್'ಗೆ ಕೂಡಾ ಸಹಕಾರಿಯಗಲಿದೆಯೆಂದು ಸ್ಕಾಟ್ಲ್ಯಾಂಡ್ ಪೊಲೀಸ್ ಮುಖ್ಯಸ್ಥ ಫಿಲ್ ಗಾರ್ಮ್ಲೇ ಹೇಳಿದ್ದಾರೆ. ಸ್ಕಾಟ್ಲ್ಯಾಂಡ್'ನಲ್ಲಿ ಶೇ.4 ರಷ್ಟು ಜನಾಂಗೀಯ ಅಲ್ಪಸಂಖ್ಯಾತರ ಜನಸಂಖ್ಯೆಯಿದ್ದು, ಕಳೆದ
ಬಾರಿ ಪೊಲೀಸ್ ನೇಮಕಾತಿ ಪ್ರಕ್ರಿಯೆಗೆ ಆ ಸಮುದಾಯ ಗಳಿಂದ ಕೇವಲ ಶೇ.2.5 ಅರ್ಜಿಗಳು ಬಂದಿದ್ದವು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.